×
Ad

ಸುಪ್ರೀಂಕೋರ್ಟ್ ಹಸ್ತಕ್ಷೇಪಕ್ಕೆ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಆಕ್ಷೇಪ

Update: 2016-03-24 23:37 IST

ಹೊಸದಿಲ್ಲಿ, ಮಾ.24: ಮುಸ್ಲಿಂ ವೈಯಕ್ತಿಕ ಕಾನೂನಿನಲ್ಲಿ ಮೂರು ಬಾರಿ ತಲಾಖ್ ನೀಡುವ ಕಾನೂನು ಸಿಂಧುತ್ವದ ಕುರಿತು ಸುಪ್ರೀಂಕೋರ್ಟ್‌ನ ಸ್ವಯಂ ಪ್ರೇರಿತ ನಿರ್ಧಾರವನ್ನು ವಿರೋಧಿಸಿರುವ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ,ಕುರ್‌ಆನ್ ಆಧಾರಿತವಾಗಿರುವ ಮುಸ್ಲಿಂ ಸಮುದಾಯದ ವೈಯಕ್ತಿಕ ಕಾನೂನಿನ ಅಧಿಕಾರ ಚಲಾಯಿಸುವ ಅಧಿಕಾರ ದೇಶದ ಉನ್ನತ ನ್ಯಾಯಾಲಯದ ವ್ಯಾಪ್ತಿಗೆ ಬರುವುದಿಲ್ಲ ಮತ್ತು ಅದನ್ನು ಪಾರ್ಲಿಮೆಂಟ್‌ನಲ್ಲಿ ರೂಪಿಸಲಾಗಿಲ್ಲ ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಅಭಿಪ್ರಾಯಪಟ್ಟಿದೆ.

       ಏಕರೂಪ ನಾಗರಿಕ ಸಂಹಿತೆಯ ಬಳಕೆಯ ಬಗ್ಗೆ ಆಕ್ಷೇಪಣೆ ಮಾಡಿರುವ ಮಂಡಳಿ,ರಾಷ್ಟ್ರೀಯ ಅಖಂಡತೆ ಮತ್ತು ಸಮಗ್ರತೆಗೆ ಅದು ಖಾತರಿ ಅಲ್ಲ ಎಂದು ಎಐಎಮ್‌ಪಿಎಲ್‌ಬಿ ಹೇಳಿದೆ.

   ಇದೇ ರೀತಿಯಲ್ಲಿ, ಹಿಂದೂ ಸಂಹಿತೆ ಮಸೂದೆ ಕೂಡ ಜಾತಿ ತಾರತ್ಯಮವನ್ನು ನಿರ್ಮೂಲನೆ ಮಾಡುವಲ್ಲಿ ವಿಫಲವಾಗಿದೆ ಎಂದು ಎಐಎಮ್‌ಪಿಎಲ್‌ಬಿ ಹೇಳಿದೆ.

       ಧರ್ಮದಿಂದ ಅಧಿಕಾರ ಪಡೆದ ಸಾಮಾಜಿಕ ನಿಯಮಗಳು ಮತ್ತು ಶಾಸಕಾಂಗದಲ್ಲಿ ಜಾರಿಗೊಂಡ ಕಾನೂನಿನ ನಡುವೆಯಿರುವ ವ್ಯತಾಸವನ್ನು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಮ್‌ಪಿಎಲ್‌ಬಿ) ವಕೀಲ ಇಝಾಜ್ ಮಕ್ಬೂಲ್‌ರವರ ಮೂಲಕ ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯಲ್ಲಿ ಮುಹಮ್ಮದಿಯನ್ ಕಾನೂನನ್ನು,ಕುರ್‌ಆನ್ ಮತ್ತು ಇಸ್ಲಾಂ ಧರ್ಮದ ಪ್ರವಾದಿಯವರ ಹದೀಸ್‌ನಿಂದ ಸ್ಥಾಪಿಸಲಾಗಿದೆ ಮತ್ತು ಸಂವಿಧಾನ 13ನೇ ವಿಧಿಯಲ್ಲಿ ನಮೂದಿಸಲ್ಪಟ್ಟಿರುವ ಚಾಲ್ತಿಯಲ್ಲಿರುವ ಕಾನೂನು ಅಭಿವ್ಯಕ್ತಿಯ ಮೇರೆಯ ಒಳಗಡೆ ಪತನಗೊಳ್ಳಲು ಸಾಧ್ಯವಿಲ್ಲ ಎಂದು ಹೇಳಲಾಗಿದೆ.ಮುಸ್ಲಿಂ ವೈಯಕ್ತಕ ಕಾನೂನು ಸಂಸತ್‌ನಲ್ಲಿ ಅಂಗೀಕಾರಗೊಂಡದ್ದಲ್ಲ ಅಥವಾ ರಚನೆ ಮಾಡಿದ್ದಲ್ಲ ಎಂದು ಅದು ಹೇಳಿದೆ.

        ಮುಸ್ಲಿಂ ವೈಯಕ್ತಿಕ ಕಾನೂನು ಎಂಬುದು ಸಾಂಸ್ಕೃತಿಕ ವಿಚಾರ,ಇದು ಇಸ್ಲಾಂ ಧರ್ಮದಲ್ಲಿ ಹಾಸುಹೊಕ್ಕಾಗಿ ಹೆಣೆದ್ದಾಗಿದೆ ಆದ್ದರಿಂದ ಸಂವಿಧಾನದ 25 ಮತ್ತು 29 ಹಾಗೂ 29 ರ ವಿಧಿಯಡಿಯಲ್ಲಿರುವ ಆತ್ಮಸಾಕ್ಷಿಯ ಸ್ವಾತಂತ್ರ ವಿಚಾರವಾಗಿದೆ ಎಂದು ಸಲ್ಲಿಸಲಾದ ಅಫಿದವಿತ್‌ನಲ್ಲಿ ಹೇಳಲಾಗಿದ್ದು,ಸುಪ್ರೀಂಕೋರ್ಟ್‌ನ ಸರಣಿ ತೀರ್ಪುಗಳ ಆದೇಶದ ಮೇಲ್ನೋಟವೂ ಮುಸ್ಲಿಂ ವೈಯಕ್ತಿಕ ಕಾನೂನಿನ ಶರತ್ತುಗಳನ್ನು ಮೂಲಭೂತ ಹಕ್ಕುಗಳ ಉಲ್ಲಂಘನೆಗಾಗಿ ಅವುಗಳನ್ನು ಪ್ರಶ್ನಿಸುವಂತಿಲ್ಲ ಎಂದು ಮಂಡಳಿ ತನ್ನ ಅರ್ಜಿಯಲ್ಲಿ ತಿಳಿಸಿದೆ .

     ಮುಸ್ಲಿಂ ಪುರುಷರು ಇಚ್ಛಾನುಸಾರ ನೀಡುವ ವಿಚ್ಛೇದನ ನೀಡುವುದರ ವಿರುದ್ಧ ಯಾವುದೇ ರಕ್ಷಣೋಪಾಯಗಳಿಲ್ಲ ಎಂದು ಪರಿಗಣಿಸಿರುವ ನ್ಯಾಯಾಲಯ, ಮುಸ್ಲಿಂ ಮಹಿಳೆಯರ ಹಕ್ಕುಗಳನ್ನು ಪರೀಕ್ಷಿಸಲು ಸುಪ್ರೀಂಕೋರ್ಟ್ ಸ್ವಯಂ ಆಗಿ ನಿರ್ಧರಿಸಿದೆ. ಸಮಾಜದ ಒಂದು ವರ್ಗದಿಂದ ಏಕರೂಪ ನಾಗರಿಕ ಸಂಹಿತೆ ಜಾರಿಯಾಗಬೇಕೆಂಬ ಒತ್ತಾಯದ ಧ್ವನಿ ಮರುಕಳಿಸುತ್ತಲೇ ಇದೆ.‘‘ಒಂದು ವೇಳೆ ಸುಪ್ರೀಂಕೋರ್ಟ್ ಮುಸ್ಲಿಂ ಮಹಿಳೆಯರಿಗಾಗಿ ನಿಯಮವನ್ನು ಜಾರಿಗೊಳಿಸಿದರೆ ಅದು ನ್ಯಾಯಾಂಗ ಶಾಸನವಾಗುತ್ತದೆ’’ಎಂದು ಎಐಎಮ್‌ಪಿಎಲ್‌ಬಿ ಹೇಳಿದೆ.

     ಹಿಂದೂ ಸಮುದಾಯದ ಪಂಗಡಗಳನ್ನು ಒಗ್ಗಟ್ಟುಗೊಳಿಸುವ ನಿಟ್ಟಿನಲ್ಲಿ 1956ರಲ್ಲಿ ಹಿಂದೂ ಸಂಹಿತೆಯನ್ನು ಜಾರಿಗೊಳಿಸಿತ್ತು. ಆದರೆ ಹಿಂದೂ ಧರ್ಮದಲ್ಲಿರುವ ವಿವಿಧ ಜಾತಿಗಳ ನಡುವೆ ಸಮಗ್ರತೆಯನ್ನು ಸಾಧಿಸುವಲ್ಲಿ ವಿಫಲವಾಗಿದೆ.‘‘ ಈಗಲೂ ಕೂಡ ಜಾತಿ ಪದ್ಧತಿ ಅಸ್ತಿತ್ವದಲ್ಲಿ ಇದೆ ಅಲ್ಲವೇ?ಆದರೆ ಜಾತಿ ವ್ಯವಸ್ಥೆ ಅಳಿದು ಹೋಗಿದೆಯೇ? ಅಸ್ಪಶ್ಯತೆ ಕೂಡ ಇಲ್ಲವಾಗಿದೆಯೇ? ದಲಿತರು ತಮ್ಮ ವಿರುದ್ಧ ನಡೆಯುತ್ತಿರುವ ತಾರತ್ಯಮದ ಬಗ್ಗೆ ಅತೃಪ್ತಿಯಿಂದ ಇಲ್ಲವೇ? ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಪ್ರಶ್ನಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News