×
Ad

ಇಂದಿನ ಕಾರ್ಯಕ್ರಮ

Update: 2016-03-24 23:47 IST

ಪೇಜಾವರ ಶ್ರೀ ಪಂಚಮ ಪರ್ಯಾಯ: ಉಡುಪಿ ಶ್ರೀಕೃಷ್ಣ ಮಠದಲ್ಲಿ ಸಂಜೆ 5ಕ್ಕೆ ಚಂದ್ರಶಾಲೆ ಪುರಾಣ ಡಾ.ಎಚ್.ಕೆ. ಸುರೇಶಾಚಾರ್ಯರಿಂದ ಪ್ರವಚನ, ಸಂಜೆ 5:45ಕ್ಕೆ ರಾಜಾಂಗಣದಲ್ಲಿ ಧಾರ್ಮಿಕ ಉಪನ್ಯಾಸ ವಿದ್ವಾನ್ ಖೇಡಾ ವೇದವ್ಯಾಸಾಚಾರ್ ಬೆಂಗಳೂರು ಇವರಿಂದ ಪ್ರವಚನ, ಸಂಜೆ 6:30ರಿಂದ ಪೇಜಾವರ ಶ್ರೀಗಳಿಂದ ಅನುಗ್ರಹ ಸಂದೇಶ. 7ಕ್ಕೆ ರಾಜಾಂಗಣದಲ್ಲಿ ಸೃಷ್ಟಿ ಕಲಾಕುಟೀರ ಉಡುಪಿ ಇದರ ಕಲಾವಿದರಿಂದ ಭರತನಾಟ್ಯ ನೃತ್ಯ ಭಕ್ತಿ, 7ಕ್ಕೆ ಸುವರ್ಣ ರಥೋತ್ಸವ, ಮಹಾಪೂಜಾ ರಥೋತ್ಸವ.

70ರ ಸಂಭ್ರಮ: ರಾಜ್ಯ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದ ಐರೋಡಿ ಗೋವಿಂದಪ್ಪ ಅವರ 70ರ ಸಂಭ್ರಮದ ಅಂಗವಾಗಿ ವಿಶೇಷ ಕಾರ್ಯಕ್ರಮ, ಸಂಮಾನ. ಸಮಯ: ರಾತ್ರಿ 9:30ಕ್ಕೆ. ಸ್ಥಳ: ಗಾಂಧಿ ಮೈದಾನ, ಕೋಟ.

ವಿಶ್ವ ಜಲ ದಿನಾಚರಣೆ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಉಡುಪಿ ವಕೀಲರ ಸಂಘ, ಸಿಐಎಸ್ ಬಾಲಕರ ವಸತಿ ನಿಲಯಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ಜಲ ದಿನಾಚರಣೆ ಕಾರ್ಯಕ್ರಮ ಮಾ.25ರಂದು ಅಪರಾಹ್ನ 3:30ಕ್ಕೆ ಉಡುಪಿ ಮಿಷನ್ ಕಾಂಪೌಂಡ್‌ನಲ್ಲಿರುವ ಸಿಐಎಸ್ ಬಾಲಕರ ವಸತಿ ನಿಲಯದಲ್ಲಿ ನಡೆಯಲಿದೆ.

ಕಾರ್ಯಕ್ರಮವನ್ನು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶೆ ನಾಗಜ್ಯೋತಿ ಉದ್ಘಾಟಿಸಲಿರುವರು. ಅಧ್ಯಕ್ಷತೆಯನ್ನು ಸಿಎಸ್‌ಐ ಕೆಎಸ್‌ಡಿ ವಲಯ ಅಧ್ಯಕ್ಷ ರೆ.ಸ್ಟೀವನ್ ಸರ್ವೋತ್ತಮ್ ವಹಿಸಲಿರುವರು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News