×
Ad

ಪುತ್ತೂರು: ‘ಮುಳಿಯ ಚಿನ್ನೋತ್ಸವ’ ಉದ್ಘಾಟನೆ

Update: 2016-03-24 23:52 IST

ಪುತ್ತೂರು, ಮಾ.24: ಮುಳಿಯ ಜ್ಯುವೆಲ್ಸ್ ಮಳಿಗೆಯು ಕಳೆದ ಏಳು ದಶಕಗಳ ಪರಂಪರೆಯೊಂದಿಗೆ ಉತ್ತಮ ಗ್ರಾಹಕ ಸಂಬಂಧವನ್ನು ಹೊಂದಿದ್ದು, ವ್ಯವಹಾರದಲ್ಲಿ ವಿಶ್ವಾಸದೊಂದಿಗೆ ಗುಣಮಟ್ಟ ಹಾಗೂ ಕಲಾತ್ಮಕ ಆಭರಣಗಳಿಂದ ಗ್ರಾಹಕರ ಮೆಚ್ಚುಗೆ ಪಡೆದಿದೆ ಎಂದು ಸುಬ್ಯಹ್ಮಣ್ಯ ಕೊಳತ್ತಾಯ ಹೇಳಿದ್ದಾರೆ.

 ಪುತ್ತೂರಿನ ಪ್ರಸಿದ್ಧ ಚಿನ್ನಾಭರಣ ಮಳಿಗೆ ಮುಳಿಐು ಕೇಶವ ಭಟ್ ಆ್ಯಂಡ್ ಸನ್ಸ್ ನಲ್ಲಿ ಆಯೋಜಿಸಲಾದ ವಿಶೇಷ ಆಭರಣಗಳ ಪ್ರದರ್ಶನ ಮತ್ತು ಮಾರಾಟ ಮೇಳ ‘ಮುಳಿಯ ಚಿನ್ನೋತ್ಸವ’ ವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು. ಚಿನ್ನೋತ್ಸವದ ವಿಶೇಷ ಮೆರುಗಾಗಿ ಸಂಸ್ಥೆಯ ವಿನ್ಯಾಸಗಾರರಿಂದ ಸೃಷ್ಟಿಸಲ್ಪಟ್ಟ ಹೊಸ ರೈನ್‌ಬೋ ಹಾಗೂ ‘ಯಂಗ್ ಹಾರ್ಟ್’ ವಿನ್ಯಾಸಗಳ ಆಭರಣಗಳನ್ನು ಮುಖ್ಯ ಅತಿಥಿಗಳು ಈ ಸಂದರ್ಭದಲ್ಲಿ ಅನಾವರಣಗೊಳಿಸಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಮಾಲಕ ಸರಾಪ್ ಮುಳಿಯ ಶ್ಯಾಮ್ ಭಟ್, ಸುಲೋಚನಾ ಶ್ಯಾಮ್ ಭಟ್, ಆಡಳಿತ ನಿರ್ದೇಶಕ ಕೃಷ್ಣ ನಾರಾಯಣ ಮುಳಿಯ, ಮುಖ್ಯ ಪ್ರಬಂಧಕ ಎ.ಎಸ್ ಭಟ್, ಶಾಖಾ ಪ್ರಬಂಧಕ ಶಿವಪ್ರಕಾಶ್ ಉಪಸ್ಥಿತರಿದ್ದರು. ಸಂಸ್ಥೆಯ ಕಸ್ಟಮರ್ ರಿಲೇಶನ್ ಮ್ಯಾನೇಜರ್ ರವೀಶ್ ಸ್ವಾಗತಿಸಿದರು. ಸಂಸ್ಥೆಯ ಗೋಲ್ಡ್ ಸಿಪ್ ಅಡ್ವೈಸರ್ ಚೇತನ್ ವಂದಿಸಿದರು. ಸಂಸ್ಥೆಯ ಡಿಸೈನರ್ ಸ್ವಾತಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News