ಟೀಸ್ಟಾರ ಸಬ್‌ರಂಗ್ ಟ್ರಸ್ಟ್ ಪರವಾನಿಗೆ ರದ್ದಾಗಲಿದೆ!

Update: 2016-03-25 05:21 GMT

ಹೊಸದಿಲ್ಲಿ, ಮಾರ್ಚ್25: ಮಾನವ ಹಕ್ಕು ಕಾರ್ಯಕರ್ತೆ ಟೀಸ್ಟಾ ಸೆಟಲ್ವಾಡ್ ರ ನೇತೃತ್ವದ ಸಬ್‌ರಂಗ್ ಟ್ರಸ್ಟ್‌ನ ವಿದೇಶದಿಂದ ಫಂಡ್ ಸ್ವೀಕರಿಸುವ ಲೈಸನ್ಸ್‌ನ್ನು ಕೇಂದ್ರಸರಕಾರ ರದ್ದುಗೊಳಿಸಲಿದೆ. ವಿದೇಶಿ ಫಂಡ್ ನಿಯಂತ್ರಿಸುವ ಕಾನೂನು ಪ್ರಕಾರ ಲೈಸನ್ಸ್ ರದ್ದುಮಾಡು ಕ್ರಮಕ್ಕೆ ಕೇಂದ್ರ ಗೃಹಸಚಿವಾಲಯ ಮುಂದಾಗಿದೆ ಎಂದು ವರದಿಯಾಗಿದೆ.

ವೈಯಕ್ತಿಕ ಅಗತ್ಯಗಳಿಗೆ ದುರ್ಬಳಕೆ ನಡೆಸಿದ್ದಾರೆಂದು ಆರೋಪಿಸಿ ಕಳೆದ ಸೆಪ್ಟಂಬರ್‌ನಲ್ಲಿ ಟ್ರಸ್ಟ್‌ನ ಲೈಸನ್ಸನ್ನು ಸಚಿವಾಲಯ ಅಮಾನತುಗೊಳಿಸಿತ್ತು. ವಿದೇಶಗಳಿಂದ ಸಿಕ್ಕುವ ಸಂಭಾವನೆಗಳಲ್ಲಿ ಶೇ. 50ಕ್ಕಿಂತ ಹೆಚ್ಚು ಮೊತ್ತವನ್ನು ಆಡಳಿತಾತ್ಮಕ ಅಗತ್ಯಗಳಿಗೆ ಉಪಯೋಗಿಸಬಾರದು ಎಂದಿರುವಾಗ ಟೀಸ್ಟಾರ ಸಂಘಟನೆ ಶೇ.65ರಷ್ಟು ಮೊತ್ತವನ್ನು ಕೇಂದ್ರದ ಅನುಮತಿ ಪಡೆಯದೆ ವಿನಿಯೋಗಿಸಿದೆ ಎಂದು ಕಾರಣ ತೋರಿಸಿ ಈ ಮೊದಲು ಟ್ರಸ್ಟ್‌ನ್ನು ಅಮಾನತುಗೊಳಿಸಲಾಗಿತ್ತು.

ಟೀಸ್ಟಾ ಮತ್ತು ಪತಿ ಜಾವೇದ್ ಆನಂದ್ ನಿಯಂತ್ರಿಸುವ ಸಬ್ರಂಗ್ ಕಮ್ಯುನಿಕೇಶನ್ಸ್  ಸಂಸ್ಥೆಗೆ ಮೊತ್ತವನ್ನು ಬಳಸಲಾಗಿದೆ ಎಂದು ಇನ್ನೊಂದು ಕಾರಣವನ್ನೂ ನೀಡಲಾಗಿದೆ. ಆರು ತಿಂಗಳಿಗೆ ಸಸ್ಪೆಂಡ್ ಮಾಡಿ ಲೈಸೆನ್ಸ್ ರದ್ದು ಮಾಡದಿರಲು ಕಾರಣ ತೋರಿಸಬೇಕೆಂದು ಸರಕಾರ ಟ್ರಸ್ಟ್‌ಗೆ ಸೂಚನೆ ನೀಡಿತ್ತು. ಸಂಘಟನೆ ಸರಕಾರಕ್ಕೆ ಉತ್ತರವನ್ನೂ ನೀಡಿತ್ತು. ಆದರೆ ಆ ಉತ್ತರ ಸರಕಾರಕ್ಕೆ ತೃಪ್ತಿಕರವಾಗಿಲ್ಲ ಎಂಬ ನಿಲುವನ್ನು ಸರಕಾರ ಕೈಗೊಂಡಿದೆ. ಈ ತಿಂಗಳು ಹತ್ತಕ್ಕೆ ಅಮಾನತು ಅವಧಿ ಕೊನೆಗೊಳ್ಳಲಿದೆ. ಹೀಗಾಗಿ ಅಧಿಕಾರಿಗಲು ಟ್ರಸ್ಟ್ ರದ್ದು ಮಾಡುವ ಕಠಿಣ ಕ್ರಮಕೈಗೊಳ್ಳಲು ಮುಂದಾಗಿದ್ದಾರೆ ಎಂದು ವರದಿಯಾಗಿವೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News