ಮಂಗಳೂರಿಗೆ ಆಗಮಿಸಿದ ಸಯನ್ಸ್ ಎಕ್ಸ್‌ಪ್ರೆಸ್ ರೈಲು: ವಿದ್ಯಾರ್ಥಿಗಳಿಗೆ ಸಂತಸ
ಮಂಗಳೂರು.ಮಾ.25: ಭಾರತ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ,ಪರಿಸರ,ಜೈವಿಕ ತಂತ್ರಜ್ಞಾನ ಇಲಾಖೆ,ಪರಿಸರ ಶಿಕ್ಷಣ ಕೆಂದ್ರ,ವಿಕ್ರಂಸಾರಾಬಾಯಿ ಸಮುದಾಯ ವಿಜ್ಞಾನ ಕೇಂದ್ರ ,ಅರಣ್ಯಮತ್ತು ಹವಾಮಾನ ಬದಲಾವಣೆ ಸಚಿವಾಲಯ ,ರೈಲ್ವೇ ಇಲಾಖೆಯ ಸಹಕಾರದೊಂದಿಗೆ ಆಯೋಜಿಸಿರುವ ಹವಾಮಾನ ಬದಲಾವಣೆಯ ಜಾಗೃತಿ ಮಾಹಿತಿ ನೀಡುವ ವಿಶೇಷ ರೈಲು ಶುಕ್ರವಾರ ಮಂಗಳೂರು ಜಂಕ್ಷನ್ ರೈಲು ನಿಲ್ದಾಣಕ್ಕೆ ಆಗಮಿಸಿದೆ.
ಕಳೆದ ಅಕ್ಟೋಬರ್ 15ರಿಂದ ದೆಹಲಿಯ ಸಪ್ದರ್ ಜಂಗ್ ರೈಲು ನಿಲ್ದಾಣದಿಂದ ಆರಂಭಗೊಂಡ 16ಎಸಿ ಬೋಗಿಗಳನ್ನು ಹೊಂದಿರುವ ಈ ರೈಲು ಬಂಡಿ 51 ನಿಲ್ದಾಣಗಳಲ್ಲಿ ಪ್ರದರ್ಶನ ನೀಡಿ ಪಾಲಕ್ಕಾಡ್ ಮಾರ್ಗವಾಗಿ ಮಂಗಳೂರಿಗೆ ಆಗಮಿಸಿದೆ.ಮಾರ್ಚ್ 28ವರೆಗೆ ಮಂಗಳೂರು ಜಂಕ್ಷನ್( ಕಂಕನಾಡಿ )ರೈಲು ನಿಲ್ದಾಣದಲ್ಲಿ ಆಕರ್ಷಕ ರೈಲು ವೀಕ್ಷಣೆಗೆ ಶಾಲಾ ವಿದ್ಯಾರ್ಥಿಗಳು,ಸಾರ್ವಜನಿಕರ ವೀಕ್ಷಣೆಗೆ ಅವಕಾಶವಿದೆ.ಬೆಳಗ್ಗೆ 10ರಿಂದ ಸಂಜೆ 5ರವರೆಗ ಈ ರೈಲು ಸಾರ್ವಜನಿಕ ವೀಕ್ಷಣೆಗೆ ತರೆದಿರುತ್ತದೆ.ಈ ರೈಲಿನಲ್ಲಿ ವಿಕ್ರಂ ಸಾರಾಬಾಯಿ ಸಮುದಾಯ ವಿಜ್ಞಾನ ಕೇಂದ್ರ,ಬೆಂಗಳೂರು ಅರಣ್ಯ,ಪರಿಸರ ಜೀವಿಶಾಸ್ತ್ರ ಇಲಾಖೆಯ ಸಿಬ್ಬಂದಿಗಳು ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸುತ್ತಾ ಇದ್ದಾರೆ.
ಈ ರೈಲು ದೇಶಾದ್ಯಂತ 7ತಿಂಗಳುಗಳ ಕಾಲಸಂಚರಿಸಿ 20ರಾಜ್ಯಗಳ ಮೂಲಕ 50 ರೈಲು ನಿಲ್ದಾಣಗಳಲ್ಲಿ ಸಾರ್ವಜನಿಕರಿಗೆ ಪರಿಸರ ಹವಾಮಾನ ಬದಲಾವಣೆಯ ಬಗೆಗಿನ ವೈಜ್ಞಾನಿಕ ಮಾಹಿತಿಗಳನ್ನು ಬುಹುಮಾಧ್ಯಮದ ಮೂಲಕ ನೀಡಲಿದೆ.ಈ ರೈಲು ಒಟ್ಟು 19,800 ಕಿ.ಮೀ ಕ್ರಮಿಸಲಿದೆ.ರೈಲಿನಲ್ಲಿ ಪರಿಸರ,ಪರಿಸರದ ಮೇಲಾಗುತ್ತಿರುವ ವಿವಿಧ ರೀತಿಯ ಪರಿಣಾಮ ಇದರಿಂದ ಉಂಟಾಗುವ ಹವಾಮಾನ ಬದಲಾವಣೆ,ಜೈವಿಕ ತಂತ್ರಜ್ಞಾನ,ಪರಿಸರಕ್ಕೆ ಹಾನಿಯಾಗದ ರೀತಿಯ ಪ್ರಾಚೀನ,ಬುಡಕಟ್ಟು ಜನರ ಜೀವನ ಕ್ರಮ,ಪರಿಸರಕ್ಕೆ ಹಾನಿಯಾಗುವ ಮಾನವ ನಿರ್ಮಿತ ಪರಿಸರ,ಪರಿಸರಕ್ಕೆ ಹಾನಿಯಾಗುವ ಕೈಗಾರಿಕೆಗಳ ಸಚಿತ್ರ ಮಾಹಿತಿ ಪ್ರಪಂಚದ ವಿವಿಧ ಭಾಗಗಳಲ್ಲಿ ವಾಸವಾಗಿರುವ ಜೀವ ಪ್ರಬೇಧ,ಜೀವ ಜಗತ್ತಿನಲ್ಲಿ ಅಳಿದು ಹೋದ ಡೈನೋಸಾರ್‌ಗಳ ಬಗ್ಗೆ ಮಾಹಿತಿ ನೀಡುವ ಮಾದರಿಗಳು,ಹವಾಮಾನದ ಬದಲಾವಣೆಯಿಂದ ಸೂರ್ಯನ ಕಿರಣದ ಪ್ರಖರತೆ ಮನುಷ್ಯನ ಮೇಲಾಗುವ ಪರಿಣಾಮ ,ಹೆಚ್ಚುತ್ತಿರುವ ಹೃದಯ ಸಂಬಂಧಿ ಕಾಯಿಲೆಗಳ ಬಗ್ಗೆ ಮಾಹಿತಿಗಳನ್ನು ಈ ರೈಲು ಬೋಗಿಗಳಲ್ಲಿದೆ.ಸೌರಶಕ್ತಿ,ನೀರಿನ ಸಮರ್ಪಕ ಬಳಕೆ,ಮಿತ ಬಳಕೆ,ನೀರಿನ ಬಳಕೆಯ ಮಹತ್ವ,ಸೌರಶಕ್ತಿ ನವೀಕರಿಸಬಹುದಾದ ಇಂಧನ ಶಕ್ತಿಯ ಬಗ್ಗೆ ಈ ರೈಲಿನಲ್ಲಿ ಮಾಹಿತಿ ಇದೆ.ಸರಳ ವಿಜ್ಞಾನದ ಮಾಹಿತಿಗಳು ಪ್ರಾತ್ಯಕ್ಷಿಕೆಗಳ ಮೂಲಕ ಸ್ವಯಂ ಸೇವಕರು ಮಕ್ಕಳಿಗೆ ವಿಜ್ಞಾನದ ಮಾಹಿತಿಯನ್ನು ನೀಡುತ್ತಿದ್ದಾರೆ.ದೇಶದ ವಿವಿಧ ಕಡೆಗಳಲ್ಲಿ ಜನಸಾಮನ್ಯರ ಮೂಲಕ ಆವಿಷ್ಕಾರವಾದ ಸರಳ ಯಂತ್ರಗಳ ಮಾಹಿತಿ ಈ ರೈಲು ಬಂಡಿಯಲ್ಲಿದೆ.