ಗೂಗಲ್ ಮ್ಯಾಪ್ಸ್ ನಲ್ಲಿ 'anti-national' ಎಂದು ಟೈಪ್ ಮಾಡಿದರೆ ಭಾರತದ ಯಾವ ಸಂಸ್ಥೆ ಬರುತ್ತದೆ ಗೊತ್ತಾ ?
Update: 2016-03-25 16:53 IST
ಹೊಸದಿಲ್ಲಿ , ಮಾ. 25 : ಜವಾಹರ್ ಲಾಲ್ ನೆಹರೂ ವಿವಿಗೆ ದೇಶವಿರೋಧಿ ಎಂಬ ಹಣೆಪಟ್ಟಿ ಕಟ್ಟಲು ಸಂಘ ಪರಿವಾರದ ಸತತ ಪ್ರಯತ್ನ ನಡೆಸಿದ್ದಾರ ಫ಼ಲವೊ ಅಥವಾ ತಾಂತ್ರಿಕ ದೋಷವೋ ಗೊತ್ತಿಲ್ಲ. ಅಂತೂ ಇಂತೂ ಗೂಗಲ್ ಮ್ಯಾಪ್ ಪ್ರಕಾರ ಜೆ ಎನ್ ಯು ದೇಶವಿರೋಧಿ ( 'anti-national' ) ಆಗಿ ಆಗಿದೆ ! ಶುಕ್ರವಾರ ಮಧ್ಯಾನದವರೆಗೆ ನೀವು ಗೂಗಲ್ ಮ್ಯಾಪ್ಸ್ ಗೆ ಹೋಗಿ ಅದರ ಸರ್ಚ್ ಬಾರ್ ನಲ್ಲಿ 'anti-national' ಎಂದು ಟೈಪ್ ಮಾಡಿದರೆ ನಿಮಗೆ ಸಿಗುವುದು ಜೆ ಎನ್ ಯು ! ಹೌದು, ಇದು ನಿಜ.
ಇದು ಯಾವುದಾದರೂ ಹ್ಯಾಕರ್ ಗಳ ಕೆಲಸವೇ ಅಥವಾ ಗೂಗಲ್ ಹೀಗೆ ಮಾಡಿದೆಯೇ ಎಂಬುದು ಇಲ್ಲೀವರೆಗೆ ಸ್ಪಷ್ಟವಾಗಿಲ್ಲ.
ಜೆ ಎನ್ ಯು ವಿದ್ಯಾರ್ಥಿ ನಾಯಕರಾದ ಕನ್ಹಯ್ಯ ಕುಮಾರ್, ಉಮರ್ ಖಾಲಿದ್ ಹಾಗು ಅನಿರ್ಬನ್ ಭಟ್ಟಾಚಾರ್ಯ ಅವರು ದೇಶದ್ರೋಹದ ಆರೋಪದಲ್ಲಿ ಇತ್ತೀಚಿಗೆ ಬಂಧಿಸಲ್ಪತ್ತಿದ್ದರು. ಈಗ ಅವರೆಲ್ಲರೂ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.