×
Ad

ಭಟ್ಕಳ : ಸಮಾಜವು ಸುಸ್ಥಿರದಲ್ಲಿ ಬದಲಾವಣೆಯಾಗಬೇಕಾದರೆ ಅದು ಮೌಲ್ಯಾಧರಿತ ಶಿಕ್ಷಣದಿಂದ ಮಾತ್ರ ಸಾಧ್ಯ - ದಾಮೋದರ್ ಎ.ಟಿ.

Update: 2016-03-25 18:40 IST

ಭಟ್ಕಳ : ಸಮಾಜವು ಸುಸ್ಥಿರದಲ್ಲಿ ಬದಲಾವಣೆಯಾಗಬೇಕಾದರೆ ಅದು ಮೌಲ್ಯಾಧರಿತ ಶಿಕ್ಷಣದಿಂದ ಮಾತ್ರ ಸಾಧ್ಯ. ಒಂದು ಸಮಾಜ ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದರೂ ಸಹ ಮೌಲ್ಯಾಧರಿತ ಶಿಕ್ಷಣ ಹೊಂದಿದಲ್ಲಿ ಖಂಡಿತ ಆ ಸಮಾಜ ಎಳಿಗೆ ಸಾಧ್ಯ ಎಂದು ಗೋವಾ ರಾಜ್ಯದ ಐ.ಎಫ್.ಎಸ್. ಅಧಿಕಾರಿ ಡಿ.ಸಿ.ಎಫ್ ದಾಮೋದರ್ ಎ.ಟಿ. ತಿಳಿಸಿದರು.
      
     ಅವರು ಶುಕ್ರವಾರ ಭಟ್ಕಳದ ನ್ಯೂ ಇಂಗ್ಲೀಷ್ ಶಾಲೆಯಲ್ಲಿ ಆಯೋಜಿಸಲಾದ ಭಟ್ಕಳ ತಾಲೂಕಾ ಅರ್ಯ ಈಡಿಗ ನಾಮಧಾರಿ ನೌಕರರ ಸಂಘದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಪ್ರತೀಬಾ ಪುರಸ್ಕಾರ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮನುಷ್ಯನಲ್ಲಿ ಆತ್ಮವಿಶ್ವಾಸ ಮತ್ತು ಆತ್ಮಬಲ ಜೊತೆಗೆ ಕಠೀಣ ಪರಿಶ್ರಮವಿದ್ದರೆ ಎಂತಹ ಸಾಧನೆ ಬೇಕಾದರೂ ಮಾಡಿ ತೋರಿಸಬಹುದು ಎಂಬುದಕ್ಕೆ ನಾನೇ ಉದಾಹರಣೆ ಎಂದು ತಿಳಿಸಿದ ಅವರು ಸಾಧನೆಗೆ ಬಡತನ ಅಡ್ಡಿಯಾಗುವುದಿಲ್ಲ ಎಂದು ತಿಳಿಸಿದರು. ಸರ್ಕಾರ ಇಂದಿನ ಯುವ ಪೀಳಿಗೆಯ ಶಿಕ್ಷಣಕ್ಕೆ ಬೇಕಾದ ಎಲ್ಲಾ ಸವಲತ್ತುಗಳನ್ನು ಒದಗಿಸುತ್ತಿದ್ದು, ಅದರ ಸದುಪಯೋಗ ಪಡೆದುಕೊಂಡು ಯುವ ಜನತೆ ದೇಶಕ್ಕೆ ಹಾಗೂ ಸಮಾಜಕ್ಕೆ ಕಿಂಚಿತ್ತು ಸಹಾಯ ಮಾಡುವಂತೆ ತಿಳಿಸಿದರು. ನಾವು ಸಮಾಜದ ದುರ್ಬಲರಿಗೆ ಆರ್ಥಿಕ ಸಹಾಯ ಮಾಡಲು ಶಕ್ತರಾಗದಿದ್ದರೂ ನಾವು ಕಲಿತ ಜ್ಞಾನವನ್ನು ಅವರಿಗೆ ದಾನ ಮಾಡುವುದರ ಮುಖಾಂತರ ಸಮಾಜ ಶೈಕ್ಷಣಿಕವಾಗಿ ಉನ್ನತಿಗೊಳ್ಳಲು ಎಲ್ಲರೂ ಪ್ರಯತ್ನಿಸೋಣಾ ಎಂದು ಕರೆ ಇತ್ತರು. ಇನ್ನೋರ್ವ ಮುಖ್ಯ ಅತಿಥಿಗಳಾದ ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಅರವಿಂದ ಕರ್ಕಿಕೋಡಿ ಮಾತನಾಡಿ ಶೋಷಿತ, ಶೂದ್ರ ಜನಾಂಗವೆಂದು ಕರೆಯಿಸಿಕೊಳ್ಳುತ್ತಿದ್ದ ನಾಮಧಾರಿಗಳಿಗೆ ಸ್ವಾಭಿಮಾನ ಕಲಿಸಿ ನಾವು ಎಲ್ಲರಂತೆ ಸಾಧನೆ ಮಾಡಲು ತೋರಿಸಿದವರು ಬ್ರಹ್ಮಶ್ರೀ ನಾರಾಯಣ ಗುರುಗಳು. ಹಾಗೇ ಸಾಧನೆ ಮಾಡಿದ ಸಮಾಜದ ಸಾಧಕರು ಅವಕಾಶ ಅಂತಾ ಬಂದಾಗ ಸಮಾಜ ವ್ಯಕ್ತಿಗಳಿಗೆ ಪ್ರಥಮ ಪ್ರಾಶಸ್ತ್ಯ ನೀಡಿ ನಂತರ ಉಳಿದವರಿಗೆ ನೀಡುವಂತಾಗಬೇಕು ಎಂದು ತಿಳಿಸಿದರು. ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ! ಲಕ್ಷ್ಮೀಶ ನಾಯ್ಕ, ಉತ್ತರ ಕನ್ನಡ ಜಿಲ್ಲಾ ಆರ್ಯ ಈಡಿಗ ನಾಮಧಾರಿ ನೌಕರರ ಸಂಘದ ಅಧ್ಯಕ್ಷ ನಾಗೇಶ ನಾಯ್ಕ, ಗೊರ್ಟೆ ಪ್ರೌಡಶಾಲೆಯ ಮುಖ್ಯೋಪಾಧ್ಯಾಯ ರಾಘವೇಂದ್ರ ನಾಯ್ಕ, ನಾಮಧಾರಿ ಸಮಾಜದ ಅಧ್ಯಕ್ಷ ಡಿ ಬಿ ನಾಯ್ಕಮುಂತಾದವರು ಈ ಸಂದರ್ಭದಲ್ಲಿ ಮಾತನಾಡಿದರು. ಭಟ್ಕಳ ಆರ್ಯ ಈಡಿಗ ನಾಮಧಾರಿ ಸಂಘದ ಅಧ್ಯಕ್ಷ ಶ್ರೀಧರ ನಾಯ್ಕ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಭಟ್ಕಳ ಶಾಖಾ ವ್ಯವಸ್ಥಾಪಕಿ ಸಂಧ್ಯಾ ನಾಯ್ಕ, ನ್ಯೂ ಇಂಗ್ಲೀಷ ಶಾಲೆಯ ಮುಖ್ಯೋಪಧ್ಯಾಯ ಎಂ ಕೆ ನಾಯ್ಕ, ಹೊನ್ನಾವರ ಆರ್ಯ ಈಡಿಗ ನಾಮಧಾರಿ ನೌಕರರ ಸಂಘದ ಅಧ್ಯಕ್ಷ ಜಿ.ಎಚ್.ನಾಯ್ಕ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯಲ್ಲಿ ಅತೀ ಹೆಚ್ಚೂ ಅಂಕ ಪಡೆದ ವಿದ್ಯಾರ್ಥಿಗಳಿಗೆ ಈ ಸಂಧರ್ಬದಲ್ಲಿ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಅದೇ ರೀತಿ ಸಾಧನೆ ಮಾಡಿದ ನೌಕರರನ್ನು, ನಿವೃತ್ತಿಗೊಂಡ ನೌಕರರನ್ನು ಹಾಗೂ ಸಮಾಜದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಈ ಸಂದರ್ಭದಲ್ಲಿ ನೌಕರರ ಸಂಘದ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News