ಭಟ್ಕಳ : ಕಛೇರಿಗಳ ಸ್ವಚ್ಚತೆ, ಮೂಲಭೂತ ಸೌಕರ್ಯದ ಆದಾರದ ಮೇಲೆ ರೆಟಿಂಗ್
Update: 2016-03-25 18:44 IST
ಭಟ್ಕಳ: ಸ್ವಚ್ಚ ಭಾರತ ಅಭಿಯಾನದ ಅಂಗವಾಗಿ ತಾಲೂಕಿನ ಸರ್ಕಾರಿ ಕಚೇರಿಗಳಿಗೆ ಭಟ್ಕಳದ ಪುರಸಭೆ ಅಧಿಕಾರಿಗಳು ಬೇಟಿ ನೀಡಿ ಕಚೇರಿಗಳ ಸ್ವಚ್ಚತೆ, ಮೂಲಭೂತ ಸೌಕರ್ಯದ ಆದಾರದ ಮೇಲೆ ರೆಟಿಂಗ್ ನೀಡುವ ಕಾರ್ಯಕ್ರಮ ಶುಕ್ರವಾರ ನಡೆದಿದೆ.
ಪ್ರಧಾನಿಯವರ ಮಹಾತ್ವಾಕಾಂಕ್ಷೇಯ ಯೋಜನೆಯಾದ ಸ್ವಚ್ಚಭಾರತ ಮಿಷನ್ ಅಬಿಯಾನವನ್ನು ಇನ್ನಷ್ಟು ಮಹತ್ವಪೂರ್ಣವಾಗಿ ಜಾರಿಗೆ ಗೊಳಿಸಲು ತಾಲೂಕಾಡಳಿತ ನಿರ್ದರಿಸಿದೆ. ಇದರ ಅಂಗವಾಗಿ ಪುರಸಭೆ ಮುಖ್ಯಾಧಿಕಾರಿ ಎಸ್.ಎಂ.ರಫಿಖ, ಪುರಸಭೆ ಆರೋಗ್ಯ ನೀರಿಕ್ಷಕಿ ಸುಜಿಯಾ ಸೋಮನ್, ಅಭಿಯಂತರರ ವೆಂಕಟೇಶ ನಾವುಡ ಇವರ ತಂಡ ಪಟ್ಟಣದ ಎಲ್ಲಾ ಸರ್ಕಾರಿ ಕಚೇರಿಗಳಿಗೆ ಬೇಟಿ ನೀಡಿದೆ. ಕಚೇರಿ, ಪ್ರಾಂಗಣದ ಸ್ವಚ್ಚತೆ, ಶೌಚಾಲಯದ ಲಭ್ಯತೆ, ಶುಚಿತ್ವ, ಉಪಯೋಗ ಮತ್ತಿತರ ಅಂಶಗಳನ್ನು ಪರಿಗಣಿಸಿ ರೆಟಿಂಗ್ ನೀಡಿ ರಿಪೋರ್ಟನ್ನು ಸರ್ಕಾರಕ್ಕೆ ರವಾನಿಸಿದೆ.