×
Ad

ಮುರುಡೇಶ್ವರ : ವಿಶ್ವ ಜಲ ದಿನಾಚರಣೆ ಹಾಗೂ ಜಲ ಶೋಧಕ ಎಂ.ಡಿ ಮ್ಯಾಥೂ ಗೆ ಸನ್ಮಾನ

Update: 2016-03-25 18:56 IST

ಮುರ್ಡೆಶ್ವರ ಆರ್.ಎನ್.ಎಸ್ ಸಮುದಾಯ ಅಭಿವೃದ್ಧಿ ಯೋಜನೆ ಹಾಗೂ ಭಟ್ಕಳದ ನಿರಂತರ ಸಮಾಜ ಸೇವಾ ಸಂಸ್ಥೆ ವತಿಯಿಂದ ಮಂಣ್ಕುಳಿಯ ಗಜಾನೊತ್ಸವ ಸಮಿತಿ ಕಟ್ಟಡದಲ್ಲಿ ವಿಶ್ವ ಜಲ ದಿನಾಚರಣೆ ಹಾಗೂ ಜಲ ಶೋಧಕ ಎಂ.ಡಿ.ಮ್ಯಾಥೂರವರಿಗೆ ಸನ್ಮಾನ ಾರಂಭ ಹಮ್ಮಿಕೊಳ್ಳಲಾಗಿತ್ತು .

 20 10 ಸಮಾರಂಭವನ್ನು ಗಿಡಗಳಿಗೆ ನೀರು ಎರೆಯುವ ಮೂಲಕ ಉದ್ಘಾಟಿಸಿದ ಭಟ್ಕಳ ಅಮಿತಾ ಆಸ್ಪತ್ರೆಯ ಡಾ.ಪಾಂಡುರಂಗ ನಾಯಕ ಮಾತನಾಡಿ ಪ್ರತಿಯೊಬ್ಬರು ನೀರಿನ ಪ್ರಾಮುಖ್ಯತೆಯನ್ನು ಅರಿತುಕೊಂಡು ,ನೀರು ವ್ಯರ್ಥವಾಗದಂತೆ ಸರಿಯಾದ ರೀತಿಯಲ್ಲಿ ಬಳಕೆ ಮಾಡುವ ಮೂಲಕ ನೀರಿನ ಸಂರಕ್ಷಣೆಯನ್ನು ಮಾಡಬೇಕೆಂದರು.   ಅಧ್ಯಕ್ಷತೆ ವಹಿಸಿ ಮಾತಾನಡಿದ ಮುರ್ಡೇಶ್ವರ ಪಾಲಿಟೆಕ್ನಿಕ್ ನ ಉಪಪ್ರಾಚಾರ್ಯ ಕೆ.ಮರಿಸ್ವಾಮಿ  ಮನುಷ್ಯ , ಪ್ರಾಣಿ ,ಗಿಡ ಮರಗಳು ನೀರಿಲ್ಲದೇ ಜೀವಿಸಲು ಸಾದ್ಯವಿಲ್ಲ. ಮನುಷ್ಯನ ಜೀವನದಲ್ಲಿ ನೀರು ಪ್ರಮುಖ ಪಾತ್ರ ವಹಿಸುತ್ತಿದ್ದು ದುರ್ಬಳಕೆಯಿಂದ ನೀರಿನ ಕ್ಷಾಮ ಎದುರುಸುತ್ತಿದ್ದೇವೆ. ಇದಕ್ಕೆ ಮುಖ್ಯ ಕಾರಣ ಜಲಸಂಖ್ಯಾಗಳ ಹೆಚ್ಚಳ , ನಗರೀಕರಣ, ಕೈಗಾರೀಕರಣ , ನೀರಿನ ಅಪವ್ಯಯ , ಅಂತರ್ಜಲ ದುರ್ಬಳಕೆ, ಪ್ರತಿಯೊಬ್ಬರು ಮನೆಸುತ್ತಾ ನೀರು ಇಂಗಿಸಿ ಜಲ ಸಂವರ್ದನೆ ,ವನ ಸಂರಕ್ಷಣೆಯನ್ನು ಮಾಡಿಕೊಳ್ಳಬೇಕೆಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಕಳೆದ  ವರ್ಷಗಳಿಂದ ಜಿಲ್ಲೆಯಲ್ಲಿ ಉಚಿತವಾಗಿ ಜಲ ಶೋಧಿಸುವ ಕಾರ್ಯದಲ್ಲಿ ನೀರತರಾಗಿ  ಸಾವಿರಕ್ಕೂ ಮೇಲ್ಪಟ್ಟು ನೀರು ಇರುವಿಕೆಯ ಸ್ಥಳವನ್ನು ಗುರುತಿಸಿ ನೀರು ತೊರಿಸುವ ಮ್ಯಾಥೂ ಎಂದೇ ಪ್ರಸಿದ್ದರಾದ ಉದ್ಯಮಿ ಎಂ.ಡಿ . ಮ್ಯಾಥೂ ರವರಿಗೆ ಈ ಸಂದರ್ಭದಲ್ಲಿ ಸನ್ಮಾಸಲಾಯಿತು. ಮುಖ್ಯ ಅತಿಥಿಗಳಾದ ನಿರಂತರ ಸಮಾಜ ಸೇವಾ ಸಂಸ್ಥೆ ಭಟ್ಕಳ ಇದರ ಅಧ್ಯಕ್ಷರಾದ ಸುರೇಶ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿ ನಮ್ಮ ಸಂಸ್ಥೆಯ ವತಿಯಿಂದ ಸಮುದಾಯ ಅಭಿವೃದ್ಧಿ ಯೋಜನೆಯಡಿಯಲ್ಲಿ ನೀಡುವ ಸೇವೆಗೆ ನಾವು ಸದಾ ಸಹಕಾರ ನೀಡುವುದಾಗಿ ತಿಳಿಸಿದರು. ವೇದಿಕೆಯ ಮೇಲೆ ಸಂಸ್ಥೆಯ ಕಾರ್ಯದ²  
 ರಾರ್ದ ದೇವಿದಾಸ , ಉಪನ್ಯಾಸಕ ಪ್ರಶಾಂತ , ಶಿಕ್ಷಕಿ ಶಾಂತಿ ವೆಂಕಟೇಶ ನಾಯ್ಕ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಎಂ.ಡಿ ಮ್ಯಾಥೂರವರು ತೆಂಗಿನ ಕಾಯಿ , ನೀರು ತುಂಬಿದ ತಂಬಿಗೆ , ಸರ ಮುಂತಾದವು ಪರಿಕರಗಳಿಂದ ಜಲಶೋಧಿಸುವ ಬಗ್ಗೆ ಸಾರ್ವಜನಿಕರಿಗೆ ಪ್ರಾತ್ಯಾಕ್ಷಿಕೆ ಮಾಡಿ ತೋರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News