ಕಾಸರಗೋಡು : ಜಿಲ್ಲೆಯ ಎಲ್ಲಾ ಕ್ರೈಸ್ತ ದೇವಾಲಯಗಳಲ್ಲಿ ವಿಶೇಷ ಪ್ರಾರ್ಥನೆ
ಕಾಸರಗೋಡು : ಯೇಸು ಕ್ರಿಸ್ತರನ್ನು ಶಿಲುಬೆಗೇರಿಸಿದ ದಿನದ ಸ್ಮರಣಾರ್ಥ ಕ್ರೈಸ್ತ ಬಾಂಧವರು ಶುಭ ಶುಕ್ರವಾರ ವನ್ನು ಭಕ್ತಿ , ಶ್ರದ್ದೆ ಯಿಂದ ಆಚರಿಸಿದರು.
ಕಾಸರಗೋಡು ಜಿಲ್ಲೆಯ ಎಲ್ಲಾ ಕ್ರೈಸ್ತ ದೇವಾಲಯಗಳಲ್ಲಿ ವಿಶೇಷ ಪ್ರಾರ್ಥನೆ ನಡೆಯಿತು.
ಕಯ್ಯಾರು ಕ್ರಿಸ್ತರಾಜ ದೇವಾಲಯದಲ್ಲಿ ನಡೆದ ಧಾರ್ಮಿಕ ವಿಧಿ - ವಿಧಾನ ವನ್ನು ಧರ್ಮಗುರು ವಂ . ವಿಕ್ಟರ್ ಡಿ ಸೋಜ ನೆರವೇರಿಸಿದರು.
ಬೇಳಾ, ಕೊಲ್ಲಂಗಾನ, ಕಾಸರಗೋಡು , ಕುಂಬಳೆ , ನಾರಾಂಪಾಡಿ, ಉಕ್ಕಿನಡ್ಕ, ಮಣಿಯ೦ಪಾರೆ, ಮಂಜೇಶ್ವರ , ತಲಪಾಡಿ , ವರ್ಕಾಡಿ , ಪಾವೂರು , ಮೀಯಪದವು ಚರ್ಚ್ ಗಳಲ್ಲಿ ವಿಶೇಷ ಪ್ರಾರ್ಥನೆ ನಡೆಯಿತು.
ಚರ್ಚ್ ಮತ್ತು ಚರ್ಚ್ ಆವರಣದಲ್ಲಿ ಯೇಸು ಕ್ರಿಸ್ತರ ಶಿಲುಬೆಯ ಮರಣ ಶಿಕ್ಷೆ ವಿಧಿಸಿದ್ದಲ್ಲಿಂದ ತೊಡಗಿ ಅವರು ಶಿಲುಬೆ ಯಲ್ಲಿ ಮರಣಿಸಿ ಸಮಾಧಿ ಮಾಡುವಲ್ಲಿನ 14 ಪ್ರಮುಖ ಘಟನಾವಳಿ ಗೆ ಸಂಬಂಧಿಸಿ 'ಶಿಲುಬೆಯ ಹಾದಿ ' ಆಚ ರಿಸುವ ಮೂಲಕ ಯೇಸುಕ್ರಿಸ್ತರು ಅನುಭವಿಸಿದ ಕಷ್ಟ - ಸಂಕಷ್ಟಗಳ ಸ್ಮರಣೆ ಮಾಡಲಾಯಿತು.
ಶುಭ ಶುಕ್ರವಾರ ದಂದು ಧ್ಯಾನ ಮತ್ತು ಉಪವಾಸ ಮೂಲಕ ಕ್ರೈಸ್ತ ಬಾಂಧವರು ಪ್ರಾರ್ಥನಾ ದಿನವಾಗಿ ಆಚರಿಸಿದರು.
ವಿಭೂತಿ ಬುಧವಾರದಿಂದ ಆರಂಭಗೊಂಡ 40 ದಿನಗಳ ವ್ರತಾಚರಣೆಯ ಕೊನೆಯ ದಿನಗಳನ್ನು ಪವಿತ್ರ ಸಪ್ತಾಹ ವನ್ನಾಗಿ ಆಚರಿಸಲಾಗುತ್ತಿದೆ . ಗರಿಗಳ ಭಾನುವಾರ ದಿಂದ ಆರಂಭಗೊಳ್ಳುವ ಸಪ್ತಾಹ ಈಸ್ಟರ್ ಭಾನುವಾರ ದೊಂದು ಮುಕ್ತಾಯಗೊಳ್ಳುತ್ತದೆ.
ಗುರುವಾರ ಯೇಸುಕ್ರಿಸ್ತರ ಕೊನೆಯ ಭೋಜನ ದಿನವನ್ನು ಆಚರಿಸಲಾಗುತ್ತಿದೆ . ಮರುದಿನ ಯೇಸು ಕ್ರಿಸ್ತರು ಶಿಲುಬೆ ಗೇರಿಸಿದ ದಿನವನ್ನಾಗಿ ಶುಭ ಶುಕ್ರವಾರ ಆಚರಿಸಲಾಗುತ್ತಿದ್ದು, ಆದಿತ್ಯವಾರ ಯೇಸು ಕ್ರಿಸ್ತರು ಪುನರುತ್ಥಾನದ ಸ್ಮರಣೆಯಾಗಿ ಈಸ್ಟರ್ ಹಬ್ಬವನ್ನು ಆಚರಿಸಲಾಗುತ್ತಿದೆ.