×
Ad

ಹರೇಕಳ: ತೆರೆದ ಬಾವಿ ಕಾಮಗಾರಿ ವೀಕ್ಷಣೆ

Update: 2016-03-25 19:15 IST
ಹರೇಕಳ ಕುತ್ತಿಮುಗೇರ್‌ನಲ್ಲಿ ನಿರ್ಮಾಣಗೊಳ್ಳುತ್ತಿರುವ ತೆರದಬಾವಿ ಕಾವಗಾರಿಯನ್ನು ಹರೇಕಳ ಪಂಚಾಯಿತಿ ಅಧ್ಯಕ್ಷೆ ಅನಿತಾ ಡಿಸೋಜ ಅವರು ಶುಕ್ರವಾರ ವೀಕ್ಷಿಸಿದರು. 

ಕೊಣಾಜೆ: ಹರೇಕಳ ಗ್ರಾಮದ ಬೈತಾರ್,ದೇರಿಕಟ್ಟೆ ಉಂಬುದ,ಕೊಜಪಾಡಿ,ಕೊಜಪಾಡಿ ಸೈಟ್,ರಾಜಗುಡ್ಡೆ,ಕೊರಪಾದೆ,ದೆಬ್ಬೇಲಿ,ಕುತ್ತಿಮುಗೇರು ಪ್ರದೇಶದಲ್ಲಿ ಬೇಸಿಗೆಕಾಲದಲ್ಲಿ ನೀರಿನ ಭವಣೆಯನ್ನು ಮನಗೊಂಡು ಆರೋಗ್ಯ ಸಚಿವರಾದ ಯು.ಟಿ. ಖಾದರ್ ಮತ್ತು ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ನಿರ್ಮಾಣಗೊಳ್ಳುತ್ತಿರುವ ತೆರದಬಾವಿಯ ಕಾಮಗಾರಿಯನ್ನು ಪಂಚಾಯಿತಿ ಅದ್ಯಕ್ಷರಾದ ಅನಿತಾ ಡಿಸೋಜ ಅವರು ಶುಕ್ರವಾರ ವೀಕ್ಷಿಸಿದರು.

 ಈ ಸಂದರ್ಭದಲ್ಲಿ ಉಪಾದ್ಯಕ್ಷರಾದ ಮಹಾಬಲ ಹೆಗ್ಡೆ, ಸದಸ್ಯರಾದ ಮೋಹಂದಾಸ್ ಶೆಟ್ಟಿ,ಬದ್ರುದ್ದೀನ್, ಮಜೀದ್, ಬಶೀರ್ ಸತ್ತಾರ್ ಬಾವಲಿಗುರಿ, ಹಾಗು ಮಾಜಿ ತಾಲೂಕು ಪಂಚಾಯಿತಿ ಸದಸ್ಯರಾದ ಮೊಹಮ್ಮದ್ ಮುಸ್ತಫರವರು ಮುಂತಾದವರು ಉಪಸ್ಥಿತರಿದ್ದರು.
ತೆರೆದ ಬಾವಿಯ ಉದ್ಘಾಟನೆಯು ಭಾನುವಾರ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News