ಮಂಗಳೂರು : ಮಾ.26 ರಿಂದ ವಿವಿಧೆಡೆ ಸಲಫಿ ಸಮಾವೇಶ
ಮಂಗಳೂರು, ಮಾ. 25: ಸೌತ್ ಕರ್ನಾಟಕ ಸಲಫಿ ಮೂವ್‌ಮೆಂಟ್‌ನ ಸಂದೇಶ ಪ್ರಚಾರ ಅಭಿಯಾನದ ಅಂಗವಾಗಿ ಮಾ.26 ರಿಂದ ಮಾ.30 ರವರೆಗೆ ಜಿಲ್ಲೆಯ ವಿವಿಧೆಡೆ ಸಲಫಿ ಸಮಾವೇಶಗಳನ್ನು ಹಮ್ಮಿಕೊಳ್ಳಲಾಗಿದೆ.
ಮಾ.26 ರಂದು ಸಂಜೆ 4 .30 ಗಂಟೆ ಗೆ ಉಪ್ಪಿನಂಗಡಿ ಸಮೀಪದ ಕರ್ವೇಲು ಎಂಬಲ್ಲಿ ನಡೆಯಲಿರುವ ಸಮಾವೇಶದಲ್ಲಿ ವೌಲವಿ ನಾಸೀರುದ್ದೀನ್ ರಹ್ಮಾನಿ ಮತ್ತು ವೌಲವಿ ಅಲಿ ಉಮರ್‌ರವರು ಉಪನ್ಯಾಸ ನೀಡಲಿದ್ದಾರೆ. ಮಾ.27 ರಂದು ಮಗ್ರಿಬ್ ನಮಾಝಿನ ಬಳಿಕ ಮಂಜನಾಡಿ ಸಮೀಪದ ಮೊಂಟೆಪದವು ಎಂಬಲ್ಲಿ ನಡೆಯಲಿರುವ ಸಮಾವೇಶದಲ್ಲಿ ಹಿರಿಯ ವಿದ್ವಾಂಸ ಚುಯೈಲಿ ಅಬ್ದುಲ್ಲ ಮುಸ್ಲಿಯಾರ್ ಉಪನ್ಯಾಸ ನೀಡಲಿದ್ದಾರೆ. ಮಾ.28 ರಂದು ಮಗ್ರಿಬ್ ನಮಾಝ್‌ನ ಬಳಿಕ ದೇರಳಕಟ್ಟೆ ಸಮೀಪದ ನಾಟೆಕಲ್ ಎಂಬಲ್ಲಿ ನಡೆಯುವ ಸಮಾವೇಶದಲ್ಲಿ ಚುಯೈಲಿ ಅಬ್ದುಲ್ಲ ಮುಸ್ಲಿಯಾರ್ ಉಪನ್ಯಾಸ ನೀಡಲಿದ್ದಾರೆ. ಮಾ.29 ರಂದು ಮಗ್ರಿಬ್ ನಮಾಝ್‌ನ ಬಳಿಕ ಫರಂಗಿಪೇಟೆ ಸಮೀಪದ ಮಾರಿಪಳ್ಳ ಎಂಬಲ್ಲಿ ನಡೆಯಲಿರುವ ಸಮಾವೇಶದಲ್ಲಿ ಚುಯೈಲಿ ಅಬ್ದುಲ್ಲ ಮುಸ್ಲಿಯಾರ್ ಉಪನ್ಯಾಸ ನೀಡಲಿದ್ದಾರೆ ಮತ್ತು ಮಾ.30 ರಂದು ಸಂಜೆ 4.30 ಕ್ಕೆ ನಂದಾವರದಲ್ಲಿ ನಡೆಯಲಿರುವ ಸಮಾವೇಶದಲ್ಲಿ ಚುಯೈಲಿ ಅಬ್ದುಲ್ಲ ಮುಸ್ಲಿಯಾರ್ ಮತ್ತು ವೌಲವಿ ಅಲಿ ಉಮರ್ ರವರು ಉಪನ್ಯಾಸ ನೀಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.