×
Ad

ಮಂಗಳೂರು : ಅಲ್-ಬದ್ರಿಯಾ ಜುಮಾ ಮಸ್ಜಿದ್ ಪಂಜಳ ಮಾ.27 ರಂದು 12 ನೇ ನಾರಿಯತ್ ಸ್ವಲಾತ್ ವಾರ್ಷಿಕೋತ್ಸವ

Update: 2016-03-25 19:49 IST

ಮಂಗಳೂರು,ಮಾ.25: ಅಲ್-ಬದ್ರಿಯಾ ಜುಮಾ ಮಸ್ಜಿದ್ ಪಂಜಳ ಇದರ ವತಿಯಿಂದ ಮಾ.27 ರಂದು ಬೆಳಿಗ್ಗೆ 11.30 ಕ್ಕೆ ‘4444 ನಾರಿಯತ್ ಸ್ವಲಾತ್’ನ 12 ನೇ ವಾರ್ಷಿಕೋತ್ಸವ ಬಹಳ ವಿಜೃಂಭಣೆಯಿಂದ ನಡೆಯಲಿರುವುದು.

 ಈ ಸಮಾರಂಭಕ್ಕೆ ಸೈಯ್ಯದ್ ಕುಟುಂಬದಲ್ಲಿ ಪ್ರಸಿದ್ದರಾದ ಹಾಫಿಳ್ ಅಸ್ಸಯ್ಯದ್ ಫಕ್ರುದ್ದೀನ್ ಹದ್ದಾದ್ ತಂಙಳ್, ಅಸಯ್ಯದ್ ಸಿ.ಟಿ.ಎಂ ಸಲೀಂ ಅಸ್ಸಖಾಫ್ ತಂಙಳ್, ಉಲೆಮಾ ಶಿರೋಮಣಿಗಳಾದ ಶೈಖುನಾ ಶರಪುಲ್ ಉಲೆಮಾ ಪಿ.ಎಂ, ಅಬ್ಬಾಸ್ ಮುಸ್ಲಿಯಾರ್ ಮಂಜನಾಡಿ, ಶೈಖುನಾ ಅಲ್‌ಹಾಜ್ ಕೆ.ಪಿ.ಹುಸೈನ್ ಸಅದಿ, ಅಲ್ಹಾಜ್ ನೂರುದ್ದೀನ್ ಮುಸ್ಲಿಯಾರ್ ನೇಕ್ರಾಜೆ, ಆರೋಗ್ಯ ಸಚಿವ ಯು.ಟಿ.ಖಾದರ್ ಇವರುಗಳು ನೇತೃತ್ವ ಕೊಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News