×
Ad

ಬ್ರಸೆಲ್ಸ್: ಉಗ್ರ ನಿಗ್ರಹ ಕಾರ್ಯಾಚರಣೆ 1 ಸಾವು

Update: 2016-03-25 22:02 IST

ಬ್ರಸೆಲ್ಸ್, ಮಾ. 25: ಭಯೋತ್ಪಾದಕ ದಾಳಿ ನಡೆದ ಮೂರು ದಿನಗಳ ಬಳಿಕ ಬೆಲ್ಜಿಯಂ ರಾಜಧಾನಿ ಬ್ರಸೆಲ್ಸ್‌ನಲ್ಲಿ ಶುಕ್ರವಾರ ಬೃಹತ್ ಭಯೋತ್ಪಾದನೆ ನಿಗ್ರಹ ದಾಳಿ ನಡೆಸಲಾಯಿತು ಎಂದು ವರದಿಗಳು ತಿಳಿಸಿವೆ.

ಬ್ರಸೆಲ್ಸ್‌ನ ಉಪನಗರ ಶೇರ್‌ಬೀಕ್‌ನಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಓರ್ವ ವ್ಯಕ್ತಿಯನ್ನು ನಿಷ್ಕ್ರಿಯ (ನ್ಯೂಟ್ರಲೈಸ್ಡ್)ಗೊಳಿಸಲಾಯಿತು (ಮೃತಪಟ್ಟಿದ್ದಾನೆ) ಎಂದು ಸುದ್ದಿ ಸಂಸ್ಥೆಯೊಂದು ಹೇಳಿದೆ.

ಶೇರ್‌ಬೀಕ್‌ನಲ್ಲಿ ಪೊಲೀಸ್ ಕಾರ್ಯಾಚರಣೆ ಆರಂಭಗೊಳ್ಳುವಾಗ ಒಂದು ಸ್ಫೋಟವೂ ಕೇಳಿಸಿತು. ಬಾಂಬ್ ನಿಷ್ಕ್ರಿಯ ದಳದವರೂ ಸ್ಥಳದಲ್ಲಿದ್ದರು. ಈ ಸ್ಥಳವನ್ನು ಪೊಲೀಸರು ಮುಚ್ಚಿದ್ದಾರೆ.

ಮಂಗಳವಾರ ಬೆಳಗ್ಗೆ ಮೂವರು ದಾಳಿಕೋರರು ಸೂಟ್‌ಕೇಸ್ ಬಾಂಬ್‌ಗಳನ್ನು ಹಿಡಿದುಕೊಂಡು ಬಂದಿದ್ದ ಜಿಲ್ಲೆಯ ಸ್ಥಳವೊಂದರಲ್ಲೇ ಇಂದು ಕಾರ್ಯಾಚರಣೆ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News