ರಿಂಗಿಂಗ್ ಬೆಲ್ಸ್ ಮಾಲಕನ ವಿರುದ್ಧ ವಂಚನೆ ಪ್ರಕರಣ
Update: 2016-03-25 23:39 IST
ನೊಯ್ಡ, ಮಾ.25: ಜಗತ್ತಿನ ಅತ್ಯಂತ ಅಗ್ಗದ ಸ್ಮಾರ್ಟ್‌ಫೋನ್ ಮಾರಾಟದ ಕೊಡುಗೆ ಮುಂದಿರಿಸಿದ್ದ ರಿಂಗಿಂಗ್ ಬೆಲ್ಸ್ ಮಾಲಕನ ವಿರುದ್ಧ ಬಿಜೆಪಿ ನಾಯಕ ಕಿರೀಟ್ ಸೋಮೈಯಾ ನೀಡಿರುವ ದೂರಿನನ್ವಯ ಇಲ್ಲಿನ ಪೊಲೀಸರು ವಂಚನೆ ಪ್ರಕರಣ ದಾಖಲಿದ್ದಾರೆ.
ಐಪಿಸಿ, ಸೆ.420 ಹಾಗೂ ಐಟಿ ಕಾಯ್ದೆಗಳನ್ವಯ ಮಂಗಳವಾರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ರಿಂಗಿಂಗ್ ಬೆಲ್ಸ್ ಸಂಸ್ಥೆ ಇತ್ತೀಚೆಗೆ ಕೇವಲ ರೂ.251ಕ್ಕೆ ಸ್ಮಾರ್ಟ್‌ಫೋನ್ ನೀಡುವ ಕೊಡುಗೆೆ ಮುಂದಿರಿಸಿತ್ತು. ರೂ.251ಕ್ಕೆ ಸ್ಮಾರ್ಟ್‌ಫೋನ್ ಉತ್ಪಾದನೆ ಸಾಧ್ಯವಿಲ್ಲ. ಕಂಪೆನಿಯ ಮಾಲಕ ಜನರನ್ನು ಮೂರ್ಖರನ್ನಾಗಿಸಿದ್ದಾನೆಂದು ಸೋಮೈಯಾ ಆರೋಪಿಸಿದ್ದಾರೆ.