×
Ad

ಸಿಯಾಚಿನ್‌ನಲ್ಲಿ ಹಿಮಪಾತ ಓರ್ವ ಯೋಧ ನಾಪತ್ತೆ

Update: 2016-03-25 23:48 IST

ಶ್ರೀನಗರ,ಮಾ.25: ಸಿಯಾಚಿನ್ ನೀರ್ಗಲ್ಲು ಪ್ರದೇಶದಲ್ಲಿ ಶುಕ್ರವಾರ ಬೆಳಗ್ಗೆ ಗಸ್ತುಪಡೆಯೊಂದು ಹಿಮಪಾತಕ್ಕೆ ಸಿಲುಕಿದ್ದು, ಓರ್ವ ಯೋಧ ನಾಪತ್ತೆಯಾಗಿದ್ದರೆ ಇನ್ನೋರ್ವ ಯೋಧ ಗಾಯಗೊಂಡಿದ್ದಾರೆ.

ಸಿಯಾಚಿನ್‌ನ ತುರ್ತಕ್ ಪ್ರದೇಶದಲ್ಲಿ ಬೆಳಗ್ಗೆ ಎಂಟು ಗಂಟೆಯ ಸುಮಾರಿಗೆ ಹಿಮಪಾತ ಸಂಭವಿಸಿದ್ದು, ಇಬ್ಬರು ಯೋಧರು ಹಿಮದಲ್ಲಿ ಹೂತು ಹೋಗಿದ್ದರು. ತಕ್ಷಣದ ರಕ್ಷಣಾ ಕಾರ್ಯಾಚರಣೆಯಲ್ಲಿ ಓರ್ವ ಯೋಧನನ್ನು ರಕ್ಷಿಸಲಾಗಿದ್ದು, ಇನ್ನೋರ್ವ ನಾಪತ್ತೆಯಾಗಿದ್ದಾನೆ ಎಂದು ರಕ್ಷಣಾ ವಕ್ತಾರರು ತಿಳಿಸಿದರು.

ರಕ್ಷಿಸಲ್ಪಟ್ಟಿರುವ ಯೋಧನ ಸ್ಥಿತಿ ಚಿಂತಾಜನಕವಾಗಿದ್ದು, ಸಮೀಪದ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿದೆ. ನಾಪತ್ತೆಯಾಗಿರುವ ಯೋಧನ ರಕ್ಷಣೆಗಾಗಿ ಎಲ್ಲ ಪ್ರಯತ್ನಗಳನ್ನೂ ಮಾಡಲಾಗುತ್ತಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News