×
Ad

ಯೆನೆಪೊಯ ಆಸ್ಪತ್ರೆಯಲ್ಲಿ ಯಶಸ್ವಿಕಿಡ್ನಿಕಸಿ ಶಸಚಿಕಿತ್ಸೆ

Update: 2016-03-25 23:49 IST

ಉಳ್ಳಾಲ, ಮಾ.25: ದೇರಳಕಟ್ಟೆಯ ಯೆನೆಪೊಯ ಆಸ್ಪತ್ರೆಯಲ್ಲಿ ರೋಗಿಯೊಬ್ಬರಿಗೆ ಕಡವೇರಿಕ್ ಮೂತ್ರಪಿಂಡ ವರ್ಗಾಯಿಸುವ (ಕಿಡ್ನಿ ಕಸಿ) ಶಸ ಚಿಕಿತ್ಸೆಯನ್ನು ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಅವಿ ಭಜಿತ ದ.ಕ. ಜಿಲ್ಲೆಯಲ್ಲಿ ಇದು ಪ್ರಥಮ ಯಶಸ್ವಿ ಶಸಚಿಕಿತ್ಸೆಯಾಗಿದೆ. ಮಾ.22ರಂದು ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಮೆದುಳು ನಿಷ್ಕ್ರಿಯವಾಗಿ ಮೃತಪಟ್ಟ ವ್ಯಕ್ತಿಯ ಮೂತ್ರಪಿಂಡವನ್ನು ಕಳೆದ ನಾಲ್ಕು ವರ್ಷಗಳಿಂದ ಕಿಡ್ನಿ ತೊಂದರೆಯಿಂದ ಬಳಲುತ್ತಿರುವ ಮಹಿಳೆಯೊಬ್ಬರಿಗೆ ಜೋಡಿಸಲಾಗಿದೆ. ಡಯಾಲಿಸಿಸ್‌ಗಾಗಿ ಆಸ್ಪತ್ರೆಗೆ ದಾಖಲಾಗಿದ್ದ 25 ವರ್ಷದ ಮಹಿಳೆಗೆ ಆಸ್ಪತ್ರೆಯ ಯೂರೋಲಾಜಿ ವಿಭಾಗದ ಡಾ.ಮುಜೀಬುರ್ರಹ್ಮಾನ್, ಡಾ.ನಿಶ್ಚಿತ್ ಡಿಸೋಜ ಮತ್ತು ಅಲ್ತಾ ್ಖಾನ್, ನೆ್ರೆೆಲಾಜಿ ವಿಭಾಗದ ಡಾ.ಸಂತೋಷ್ ಪೈ, ಅನಸ್ತೇಷಿಯಾ ವಿಭಾಗದ ಡಾ.ಪದ್ಮನಾಭ ಭಟ್, ಡಾ.ರಾಮ ಮೂರ್ತಿ ಮತ್ತು ಶ್ರುತಿ ಯನ್ನೊಳಗೊಂಡ ವೈದ್ಯರ ತಂಡ ಶಸಚಿಕಿತ್ಸೆ ನಡೆಸಿದೆ. ಂಗಾಂಗ ದಾನಕ್ಕೆ ಸಂಬಂಸಿ ಉಡುಪಿ ಜಿಲ್ಲಾಕಾರಿ ಡಾ.ವಿಶಾಲ್ ಮತ್ತು ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಯೂರೋಲಾಜಿ ಮತ್ತು ನೆ್ರೆೆಲಾಜಿ ವಿಭಾಗದ ಸಹಕಾರವನ್ನು ಯೆನೆಪೊಯ ಆಸ್ಪತ್ರೆಯ ಮುಖ್ಯಸ್ಥರು ಶ್ಲಾಘಿಸಿದ್ದಾರೆ.
ಅತ್ಯಂತ ಕಡಿಮೆ ವೆಚ್ಚದಲ್ಲಿ ರೋಗಿಗೆ ಶಸಚಿಕಿತ್ಸೆ ನಡೆಸಲಾಗಿದ್ದು, ಇದರಿಂದ ಮೂತ್ರಪಿಂಡ ವರ್ಗಾ ವಣೆ ಮತ್ತು ಅಂಗಾಂಗ ದಾನಕ್ಕೆ ಸಂಬಂಸಿದ ಕಾರ್ಯಕ್ಕೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ಯೆನೆಪೊಯ ವಿವಿ ಹಣಕಾಸು ವಿಭಾಗದ ನಿರ್ದೇಶಕ ಯೇನೆಪೊಯ ರ್ಹಾದ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News