ಕಲ್ಕಟ್ಟ: ಮಾ.27ರಂದು ವಿಜೇತ ಅಭ್ಯರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ
Update: 2016-03-26 11:53 IST
ಉಳ್ಳಾಲ. ಮಾ, 26: ನಾಗರಿಕ ಸಮಿತಿ ಕಟ್ಟೆಮಾರ್ ಮಂಜನಾಡಿ ಗ್ರಾಮ ವತಿಯಿಂದ ವಿಜೇತ ಅಭ್ಯರ್ಥಿಗಳಿಗೆ ಅಭಿನಂದನ ಕಾರ್ಯಕ್ರಮ ಮಾ.27ರಂದು ಸಂಜೆ 4ಗಂಟೆಗೆ ಕಲ್ಕಟ್ಟ ಅಮೆಮಾರ್ ಹಸಿರು ಮೈದಾನದಲ್ಲಿ ನಡೆಯಲಿದೆ.
ಕಟ್ಟೆಮಾರ್ ಹಿರಿಯ ನಾಗರಿಕ ಪಕೀರ್ ಸಾಹೇಬ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಮಂಜನಾಡಿ ಗ್ರಾ.ಪಂ ಅಧ್ಯಕ್ಷ ಮುಹಮ್ಮದ್ ಅಸೈ ಅಧ್ಯಕ್ಷತೆಯಲ್ಲಿ ಸಚಿವ ಯು.ಟಿ ಖಾದರ್, ಮಾಜಿ ಜಿ.ಪಂ ಸದಸ್ಯ ಎ.ಎಸ್ ಕರೀಂ, ಜಿ.ಪಂ ಸದಸ್ಯ ರಶೀದಾ ಬಾನು ಹರೇಕಳ, ಮಾಜಿ ತಾ.ಪಮ ಸದಸ್ಯ ನೆಕ್ಕರ್ ಬಾವು, ಮಂಜನಾಡಿ ಗ್ರಾ.ಪಂ ಸದಸ್ಯರಾದ ಎ.ಎಂ ಕುಂಞಬಾವ ಹಾಜಿ, ಮೊದಿನ್ ಕುಂಞ ಮುಂತಾದವರು ಮುಖ್ಯ ಅತಿಥಿಯಾಗಿ ಭಾಗವಹಿಸಿಲಿದಾರೆ ಎಂದು ನಾಗರಿಕ ಸಮಿತಿ ಕಟ್ಟೆಮಾರ್ ಅಧ್ಯಕ್ಷ ಮೋನು ಕೆ.ಎಂ ಪ್ರಕಟನೆಯಲ್ಲಿ ತಿಳಿಸಿದ್ದಾರೆ.