×
Ad

ಭಾರತದಲ್ಲಿ ಗೋವವನ್ನು ಗುರಿಯಿಟ್ಟ ಐಸಿಸ್:ಎಂಫೋರ್ಸ್‌ಮೆಂಟ್ ವರದಿ

Update: 2016-03-26 13:04 IST

ಪಣಜಿ, ಮಾರ್ಚ್.26: ಭಾರತದಲ್ಲಿ ಭಯೋತ್ಪಾದನ ದಾಳಿ ನಡೆಸುವ ಯೋಜನೆ ಹಾಕಿರುವ ಐಸಿಸ್ ಗೋವಾವನ್ನು ಗುರಿಯಾಗಿಟ್ಟಿದೆ ಎಂದು ವರದಿಯಾಗಿವೆ. ಭಯೋತ್ಪಾದನೆ ಆರೋಪದಲ್ಲಿ ಬಂಧಿಸಲ್ಪಟ್ಟವರಿಂದ ಇಂತಹದೊಂದು ಮಾಹಿತಿ ಲಭಿಸಿದೆ ಎಂದು ಎಂಫೋರ್ಸ್‌ಮೆಂಟ್ ವಿಭಾಗ ತಿಳಿಸಿರುವುದಾಗಿ ವರದಿಯಾಗಿದೆ.

ಜಾಗತಿಕ ಗಮನ ಸೆಳೆಯುವ ಪಶ್ಚಿಮ ಏಷ್ಯನರಲ್ಲಿ ನೈತಿಕ ಪ್ರಜ್ಞೆಯನ್ನು ಹೆಚ್ಚಿಸಲಿಕ್ಕಾಗಿ ಐಸಿಸ್ ವಿದೇಶಿ ಟೂರಿಸ್ಟ್‌ಗಳನ್ನು ಮತ್ತು ಭಾರತೀಯ ಸೈನಿಕರನ್ನು ಗುರಿಯಾಗಿಟ್ಟಿದೆ ಎಂದು ಹೇಳಲಾಗುತ್ತಿದೆ. ಇದಕ್ಕಾಗಿ ಅದು ಜನರಿಗೆ ತರಬೇತಿ ನೀಡುತ್ತಿದೆಯೆಂದು ಎಂಫೋರ್ಸ್‌ಮೆಂಟ್ ಹೇಳಿದೆ. ಯುರೋಪ್, ಅಮೆರಿಕ, ರಷ್ಯಾ ಮುಂತಾದೆಡೆಯಿಂದ ವಿದೇಶಿಗಳು ಹೆಚ್ಚು ಹೆಚ್ಚು ಬರುವ 2014ರ ಡಿಸೆಂಬರ್ ತಿಂಗಳಲ್ಲಿ ದಾಳಿಯ ಯೋಜನೆಯನ್ನು ಹಾಕಿತ್ತೆಂದು ಗುಪ್ತಚರ ಏಜೆನ್ಸಿಗಳು ಹೇಳಿವೆ.

ಕಳೆದ ನಾಲ್ಕು ತಿಂಗಳಲ್ಲಿ ವಿವಿಧ ರಾಜ್ಯಗಳಿಂದ ಐಸಿಸ್ ಭಯೋತ್ಪಾದಕರೆಂದು 24 ಮಂದಿಯನ್ನು ಭಾರತೀಯ ಎಜೆನ್ಸಿಗಳು ಬಂಧಿಸಿವೆ. ಹರಿದ್ವಾರ ಸಹಿತ ಬಾಂಬ್ ಸ್ಫೋಟಕ್ಕೆ ಯೋಜನೆ ಹಾಕಿದ್ದರೆಂದು ಆರೋಪಿಸಲಾದ ಐದು ಮಂದಿ ಇದರಲ್ಲಿ ಸೇರಿದ್ದಾರೆ. ಭಾರತದಿಂದ ಮೂವತ್ತರಷ್ಟು ಮಂದಿ ಐಸಿಸ್‌ಗಾಗಿ ಸಿರಿಯ ಮತ್ತು ಇರಾಕ್‌ನಲ್ಲಿ ಯುದ್ಧ ಮಾಡುತ್ತಿದ್ದಾರೆಂದು ಮತ್ತು ಇವರಲ್ಲಿ ಆರುಮಂದಿ ಹತರಾಗಿದ್ದಾರೆಂದು ದೃಢೀಕರಿಸಿದ ವರದಿಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News