ಸಾಂವಿಧಾನಿಕ ಸಂಸ್ಥೆಗಳು ಫ್ಯಾಶಿಸ್ಟರ ಬಿಗಿ ಮುಷ್ಟಿಯಲ್ಲಿದೆ: ಟೀಸ್ಟಾ ಸೆಟಲ್ವಾಡ್

Update: 2016-03-26 09:58 GMT

ತೃಶೂರು, ಮಾರ್ಚ್.26: ದೇಶದ ಸಾಂವಿಧಾನಿಕ ಸಂಸ್ಥೆಗಳಲ್ಲಿ ಪ್ಯಾಶಿಸ್ಟರು ಬಿಗಿಮುಷ್ಟಿಯನ್ನು ಹರಡುತ್ತಿದ್ದಾರೆ ಎಂದು ಪ್ರಮುಖ ಮಾನವಹಕ್ಕುಗಳ ಕಾರ್ಯಕರ್ತೆ ಟೀಸ್ಟಾ ಸೆಟಲ್ವಾಡ್ ಟೀಕಿಸಿದ್ದಾರೆ. ತೃಶೂರ್ ಫೀಪಲ್ಸ್ ಎಗೈನ್ಸ್‌ಟ್ ಫ್ಯಾಶಿಸಂ ಎಂಬ ಸಂಘಟನೆ ಏರ್ಪಡಿಸಿದ ಮಾನವ ಹಕ್ಕು ಸಂಗಮವನ್ನು ಉದ್ಘಾಟಿಸಿ ಅವರು ಮಾತಾಡುತ್ತಿದ್ದರು. ಅಸ್ಸಾಮ್‌ನಲ್ಲಿ ಕೇಂದ್ರ ಸಚಿವರೊಬ್ಬರು ನೀಡಿದ ಹೇಳಿಕೆ ಭಾರತವನ್ನು ವಿಭಜಿಸುವಂತಹದ್ದಾಗಿದೆ. ದೇಶ ವಿಭಜನೆಗೆ ಹಿಂದೂ ಮಹಾಸಭಾ ಜವಾಬ್ದಾರವಾಗಿದೆ ಎಂದು ಅವರು ಹೇಳಿರುವುದಾಗಿ ವರದಿಯಾಗಿದೆ.

ರೋಹಿತ್ ವೇಮುಲಾ ರಾಧಿಕಾ ವೇಮುಲಾ, ಉಮರ್ ಖಾಲಿದ್, ಅನಿರ್ಬಣ್ ಇವರೆಲ್ಲ ಸೇರಿ ಭಾರತವನ್ನು ನಿರ್ಮಿಸಿದ್ದಾರೆ. ಎಲ್ಲರಿಗೂ ಅವರವರ ಪಾಲು ಇವೆ. ಈ ಸರಕಾರ ಪ್ರಜಾಪ್ರಭುತ್ವಕ್ಕೆ ಹೆದರುತ್ತಿದೆ. ಆದ್ದರಿಂದಲೇ ಯಾವ ಪ್ರಶ್ನೆಗಳಿಗೂ ಉತ್ತರಿಸುವ ಗೋಜಿಗೆ ಹೋಗುವುದಿಲ್ಲ. ಕ್ರೋನಿಕ್ ಪ್ಯಾಶಿಸಂನ ಟಿವಿ ಆ್ಯಂಕರ್‌ಗಳು ಶಟ್ ಡೌನ್ ಜೆಎನ್‌ಯು ಎಂದು ಹೇಳುವುದು. ಸ್ವಾತಂತ್ರ್ಯ ಸಮರದಲ್ಲಿ ಭಾಗವಹಿಸದ ಒಂದು ಸಿದ್ಧಾಂತಕ್ಕೆ ಜನರನ್ನು ದೇಶಪ್ರೇಮಿ ಎಂದೂ ದೇಶದ್ರೋಹಿ ಎಂದೂ ವಿಶ್ಲೇಷಿಸಲು ಹೇಗೆ ಸಾಧ್ಯ ಎಂದು ಟೀಸ್ಟಾ ಸೆಟಲ್ವಾಡ್ ಪ್ರಶ್ನಿಸಿದ್ದಾರೆ.

ಜೆಎನ್‌ಯುನಲ್ಲಿ ಅಧ್ಯಾಪಕರು ಅವರ ವಿದ್ಯಾರ್ಥಿಗಳನ್ನು ಬೆಂಬಲಿಸಲು ಸಿದ್ಧರಾದಾಗ ಹೈದರಾಬಾದ್ ವಿಶ್ವವಿದ್ಯಾನಿಲಯದಲ್ಲಿ ಕೇವಲ ಸಣ್ಣಪ್ರಮಾಣದಲ್ಲಿ ಮಾತ್ರ ಅಧ್ಯಾಪಕರು ಅಲ್ಲಿನ ವಿದ್ಯಾರ್ಥಿಗಳನ್ನು ಬೆಂಬಲಿಸಿದರು ಎಂದು ಟೀಸ್ಟಾ ಬಹಿರಂಗವಾಗಿಟೀಕಿಸಿದ್ದಾರೆ.

ಭಾರತೀಯ ಸಂವಿಧಾನ, ಪ್ರಜಾಪ್ರಭುತ್ವ, ಫ್ಯಾಶಿಸಂ ಎಂಬ ವಿಷಯದಲ್ಲಿ ನಡೆದ ಸೆಮಿನಾರ್‌ನಲ್ಲಿ ಎಂ.ಬಿ.ರಾಜೇಶ್, ಬಿನಾಯ್ ವಿಶ್ವಂ ಮುಂತಾದವರು ಭಾಗವಹಿಸಿದ್ದರು. ನಾಲ್ಕು ಗಂಟೆಗೆ ವಾಕ್ ಟು ಫ್ರೀಡಂ ಎಂಬಕಾರ್ಯಕ್ರಮದ ನಂತರ 6:30ಕ್ಕೆ ಸಾಂಸ್ಕೃತಿಕ ಸಮ್ಮೇಳನ ಆನಂತರ ಪ್ರತಿರೋಧ ಸಂಗೀತ ರಾತ್ರೆ ಕೂಡಾ ನಡೆಯಲಿದೆ. ಮಾನವಹಕ್ಕು ಸಂಗಮ ಎರಡು ದಿನಗಳವರೆಗೆ ನಡೆಯಲಿದೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News