ವರನನ್ನು ಸಜ್ಜುಗೊಳಿಸಿದ ಸಹಕೈದಿಗಳು: ಪೊಲೀಸ್ ಕಾವಲಿನಲ್ಲಿ ನಡೆದ ಕೈದಿಯೊಬ್ಬನ ವಿವಾಹ!

Update: 2016-03-26 10:00 GMT

ಕೊಲ್ಲಂ, ಮಾರ್ಚ್. 26: ನಿನ್ನೆ ಇಲ್ಲಿನ ಜೈಲು ಮದುವೆ ಮನೆಯಂತಾಗಿತ್ತು. ವರನನ್ನು ಸಜ್ಜುಗೊಳಿಸಿ ವಿವಾಹ ಮಂಟಪಕ್ಕೆ ಕರೆದೊಯ್ದು ಎಲ್ಲದ್ದಕ್ಕೂ ಸಾಕ್ಷಿಯಾಗುವವರೆಗೂ ಸಹಕೈದಿಗಳು ಮದುವೆಯಲ್ಲಿ ಪಾಲ್ಗೊಂಡಿರುವ ಘಟನೆ ವರದಿಯಾಗಿದೆ. ಪೊಲೀಸ್ ಕಾವಲಿನಲ್ಲಿ ವಿವಾಹ ಸಮಾರಂಭ ನಡೆದಿತ್ತು. ಹೊಡೆದಾಟದ ಪ್ರಕರಣವೊಂದರಲ್ಲಿ ಜೈಲುಪಾಲದ ಯುವಕನನ್ನು ನ್ಯಾಯಾಲಯದ ಅನುಮತಿಯೊಂದಿಗೆ ಪೊಲೀಸರು ವಿವಾಹ ಮಂಟಕ್ಕೆ ತಲುಪಿಸಿದ್ದರು. ಕೊಟ್ಟಿಯಂ ನಡದ ವಡಕ್ಕತ್ತಿ ಸುಮಿತ್ ಭವನದ ಸುಮಿತ್ ದಾಸ್(28)ಜೈಲಿಂದ ಮರಳಿ ನಿನ್ನೆ ವಿವಾಹಿತನಾದ ವರನಾಗಿದ್ದಾನೆ. ಪಳ್ಳಿಮುಕ್‌ದೇವಾಲಯವೊಂದರಲ್ಲಿ ನಿನ್ನೆ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಸೌಮ್ಯ ಎಂಬ ಯುವತಿಯನ್ನು ಆತ ವರಿಸಿದ್ದಾನೆ.

ಕಳೆದ ಹದಿನೆಂಟನೆ ತಾರೀಕಿನಂದು ಬಾರೊಂದರ ಮುಂದುಗಡೆ ನಡೆದಿದ್ದ ಹೊಡೆದಾಟದಲ್ಲಿ ಸುಮಿತ್ ಜೈಲುಪಾಲಾಗಿದ್ದ.ಜಾಮೀನು ದೊರಕದ್ದರಿಂದ ಕೊಲ್ಲಂ ಜುಡಿಷಿಯಲ್ ಫಸ್ಟ್‌ಕ್ಲಾಸ್ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಕೋರ್ಟು ಮೂರುಗಂಟೆ ಸಮಯವನ್ನು ವಿವಾಹಕ್ಕಾಗಿ ನೀಡಿತ್ತು. ಬಟ್ಟೆ ಅಂಗಡಿಯೊಂದರಲ್ಲಿ ದುಡಿಯುವ ಸೌಮ್ಯ ಸುಮಿತ್‌ನ ವಧು ಆಗಿದ್ದಾಳೆ.

ಸುಮಿತ್ ಮೊದಲು ಇದೇ ಅಂಗಡಿಯಲ್ಲಿ ದುಡಿಯುತ್ತಿದ್ದ. ಪೊಲೀಸ್ ಕಾವಲಿನಲ್ಲಿ ಸುಮಿತ್ ಸೌಮ್ಯರ ಮದುವೆನಡೆದಿತ್ತು. ವಿವಾಹ ಔತಣದಲ್ಲಿ ಪೊಲೀಸರು ಪಾಲ್ಗೊಂಡಿದ್ದರು. ನಂತರ ಪೊಲೀಸರು ಸುಮಿತ್‌ನನ್ನು ಮರಳಿ ಜೈಲಿಗೆ ತಂದು ಬಿಟ್ಟಿದ್ದಾರೆ. ವಿವಾಹದ ನಂತರ ಜೈಲಿಗೆ ಮರಳಿದ ಸುಮಿತ್‌ಗೆ ಸಹಕೈದಿಗಳು ಅದ್ದೂರಿ ಸ್ವಾಗತವನ್ನು ನೀಡಿದ್ದಾರೆಂದು ವರದಿಯಾಗಿದೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News