×
Ad

ಬಿ.ಸಿ.ರೋಡ್ : ಕೊನೆಗೂ ಸಮಸ್ಯೆ ನಿವಾರಣೆಗೆ ಮುಂದಾದ ಅಧಿಕಾರಿಗಳು

Update: 2016-03-26 17:26 IST

ಬಂಟ್ವಾಳ: ಬಿ.ಸಿ.ರೋಡ್ ಸರ್ವೀಸ್ ರಸ್ತೆಯಲ್ಲಿ ನಿರಂತರ ಉಂಟಾಗುತ್ತಿರುವ ಟ್ರಾಫಿಕ್ ಜಾಮ್ ಸಮಸ್ಯೆ ನಿವಾರಣೆಗೆ ಕೊನೆಗೂ ಅಧಿಕಾರಿಗಳು ಮುಂದಾಗಿದ್ದಾರೆ.

   ಬಿ.ಸಿ.ರೋಡ್ ಸರ್ವೀಸ್ ರಸ್ತೆಯಲ್ಲಿ ದಿನನಿತ್ಯ ಉಂಟಾಗುತ್ತಿರುವ ಟ್ರಾಫಿಕ್ ಕಿರಿಕಿರಿಯಿಂದಾಗಿ ಸಾರ್ವಜನಿಕರು ಇನ್ನಿಲ್ಲದ ತೊಂದರೆ ಅನುಭವಿಸುವಂತಾಗಿದೆ.

ಇದನ್ನು ಮನಗಂಡ ಬಂಟ್ವಾಳ ಟ್ರಾಫಿಕ್ ಎಸ್ಸೈ ಚಂದ್ರಶೇಖರಯ್ಯ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಮುಖ್ಯಧಿಕಾರಿಯೊಂದಿಗೆ ಚರ್ಚೆ ನಡೆಸಿ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದ್ದರು.

ಈ ನಿಟ್ಟಿನಲ್ಲಿ ಶನಿವಾರ ಬೆಳಗ್ಗೆ ಸ್ಥಳಕ್ಕೆ ಭೇಟಿ ನೀಡಿದ ಎಸ್ಸೈ ಚಂದ್ರಶೇಖರಯ್ಯ, ಪುರಸಭೆ ಅಧ್ಯಕ್ಷ ರಾಮಾಕ್ರಷ್ಣ ಆಳ್ವ, ಉಪಾಧ್ಯಕ್ಷ ಮುಹಮ್ಮದ್, ಮುಖ್ಯಧಿಕಾರಿ ಸುಧಾಕರ್ ಭಟ್ ಪರಿಶೀಲನೆ ನಡೆಸಿದರು.

ರೋಟರಿ ಹಾಗೂ ಸ್ಥಳೀಯ ಉದ್ಯಮಿಗಳ ನೆರವಿನೊಂದಿಗೆ ಬೇಸಿಗೆ ಮತ್ತು ಮಳೆಗಾಲದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವ ಹಾಗೆ ಸರ್ವೀಸ್ ರಸ್ತೆಯಲ್ಲಿ ಹಳೆ ತಾಲೂಕು ಕಚೇರಿಗೆ ತಾಗಿಕೊಂಡು ತಾತ್ಕಾಲಿಕ ಬಸ್ ಸೆಲ್ಟರ್ ನಿರ್ಮಾಣ, ಸುಮಾರು 20 ಪೈಪ್ ಗಳನ್ನು ಅಳವಡಿಸಿಕೊಂಡು ಚರಂಡಿ ನಿರ್ಮಾಣ ಹಾಗೂ ಸರ್ವೀಸ್ ರಸ್ತೆ ಅಗಲೀಕರಣ ಮಾಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಯಿತು.

ಅಲ್ಲದೆ, ಸರ್ವೀಸ್ ರಸ್ತೆ ಬದಿ ಇರುವ ಅನಧಿಕ್ರತ ಅಂಗಡಿಗಳ ತೆರವುಗೊಳಿಸುವುದು, ಬೇಕಾಬಿಟ್ಟಿ ಪಾರ್ಕಿಂಗ್ ಗೆ ಮಾಡುವುದಕ್ಕೆ ಕಡಿವಾಣ ಹಾಕುವ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದು ಇದೇ ಸಂದರ್ಭದಲ್ಲಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News