ಬೆಳ್ತಂಗಡಿ:ಫ್ರೆಂಚ್ ನ ಕಾರ್ಯಕರ್ತರ ವಿರುದ್ದ ಕ್ರಮ ಕೈಗೊಳ್ಳುವಂತೆ, ಕ್ಯಾಂಪಸ್ ಫ್ರಂಟ್ ವತಿಯಿಂದ ಪ್ರತಿಭಟನೆ
ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿನಿಯರು ಮತ್ತು ವಿದ್ಯಾರ್ಥಿಗಳಿಗೆ ಹಲ್ಲೆ ನಡೆಸಿದ ಸ್ವದೇಶಿ ಜಾಗರಣ
ಫ್ರೆಂಚ್ ನ ಕಾರ್ಯಕರ್ತರ ವಿರುದ್ದ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕ್ಯಾಂಪಸ್ ಫ್ರಂಟ್‌ನ ವತಿಯಂದ ಬೆಳ್ತಂಗಡಿ ಮೂರುಮಾರ್ಗದ ಶನಿವಾರ ಬಳಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಜಿಲ್ಲಾ ಕಾರ್ಯದರ್ಶಿ ರಮೀರ್ ಸುನ್ನತ್‌ಕೆರೆ ಮಾರ್ಚ್17ರಂದು ಜಾರ್ಖಂಡ್‌ನಲ್ಲಿ ದನ ಸಾಗಾಟದ ನೆಪವೊಡ್ಡಿ ಇಬ್ಬರು ಮುಸ್ಲಿಂ ಜಾನುವಾರು ವ್ಯಾಪಾರಿಗಳ ಮೇಲೆ ಸಂಘಪರಿವಾರದ ಕಾರ್ಯಕರ್ತರು ಹಲ್ಲೆ ನಡೆಸಿ, ಬಳಿಕ ಮರವೊಂದರಲ್ಲಿ ನೇಣು ಹಾಕಿದ ಆಘಾತಕಾರಿಯಾದ ಘಟನೆಯ ವಿರುದ್ಧ ವಿದ್ಯಾರ್ಥಿಗಳು ದಿಲ್ಲಿಯಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಸಂಘಪರಿವಾರದ ಗೂಂಡಾಗಳು ನುಗ್ಗಿ ವಿದ್ಯಾರ್ಥಿಗಳ ಮೇಲೆ ಅಮಾನುಷವಾಗಿ ಮಾರಕಾಯುಧಗಳಿಂದ ಹಲ್ಲೆ ನಡೆಸಿರುತ್ತಾರೆ. ಪ್ರತಿಭಟನೆ ನಡೆಸುವುದು ಪ್ರತಿಯೊಬ್ಬ ನಾಗರಿಕನ ಸಂವಿಧಾನಾತ್ಮಕ ಹಕ್ಕಾಗಿದ್ದು, ಇದಕ್ಕೆ ಸಂಘಪರಿವಾರದ ಕೆಲವು ದುಷ್ಟ ಶಕ್ತಿಗಳು ತಡೆಯನ್ನೊಡ್ಡುತ್ತಿದ್ದು, ಇಂತಹ ದುಷ್ಟ ಶಕ್ತಿಗಳ ವಿರುದ್ಧ ಮಾನ್ಯ ರಾಷ್ಟ್ರಪತಿಗಳು ಮಧ್ಯಪ್ರವೇಶಿಸಬೇಕು, ಹಾಗೂ ಇಂತಹ ಶಕ್ತಿಗಳ ವಿರುದ್ಧಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಪ್ರತಿಭಟನಾಕಾರರು ಪ್ರತಿಭಟನೆ ಬಳಿಕ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿ ಸರಕಾರಿ ಪ್ರಾಯೋಜಿತವಾಗಿ ನಡೆದ ರೋಹಿತ್ ವೇಮುಲರ ಆತ್ಮಹತ್ಯೆ, ಜೆಎನ್‌ಯು ವಿದ್ಯಾರ್ಥಿಗಳ ಮೇಲೆ ನಡೆದ ಧಾಳಿ ವಿದ್ಯಾರ್ಥಿ ಚಳುವಳಿಗಳನ್ನ ಹತ್ತಿಕ್ಕುವ ಪ್ರಯತ್ನವಾಗಿದ್ದು, ಇದು ಅವುಗಳ ಮುಂದುವರಿದ ಭಾಗವಾಗಿದೆ. ಈ ರೀತಿಯಾಗಿ ಯಾರೆಲ್ಲಾ ತನ್ನ ವಿರುದ್ಧ ಮಾತನಾಡುತ್ತಿದ್ದಾರೋ, ಅವರನ್ನು ವ್ಯಯಸ್ಥಿತವಾಗಿ ಮುಗಿಸುವಂತಹ ಷಡ್ಯಂತ್ರಗಳು ನಡೆಯುತ್ತಿದ್ದು, ಖ್ಯಾತ ವಿಚಾರವಾದಿಗಳಾದ ಗೋವಿಂದ ಪನ್ಸಾರೆ, ಡಾ|| ಎಂ. ಎಂ. ಕಲಬುರ್ಗಿ, ದಾಬೋಲ್ಕರ್‌ರಂತವರನ್ನು ನಿರ್ದಾಕ್ಷಿಣ್ಯವಾಗಿ ಕೊಂದರೂ, ಕೇಂದ್ರ ಸರಕಾರವು ಇವರ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೆ, ಹಂತಕರಿಗೆ ಪರೋಕ್ಷ ಬೆಂಬಲ ನೀಡುತ್ತಿರುವುದು ಬಹಳಷ್ಟು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. ಈ ರೀತಿಯಾಗಿ ದೇಶದಾದ್ಯಂತ ಅಸಹಿಷ್ಣುತೆ ಎಗ್ಗಿಲ್ಲದೆ ಮುಂದುವರಿಯುತ್ತಿದ್ದು, ಕಾನೂನು ಸುವ್ಯವಸ್ಥೆ ಪಾಲಿಸಬೇಕಾದ ಸರಕಾರಿ ಯಂತ್ರವೇ ಇದಕ್ಕೆ ನೇರ ಬೆಂಬಲವನ್ನು ನೀಡುತ್ತಿವೆ. ಆದುದರಿಂದ ಮಾನ್ಯ ರಾಷ್ಟ್ರಪತಿಗಳು ಮಧ್ಯ ಪ್ರವೇಶಿಸಿ ಇಂತಹ ದೇಶ ವಿರೋಧಿ ಘಟನೆಯ ವಿರುದ್ಧ ಕ್ರಮ ಕೈಗೊಂಡು ಪ್ರಜಾಪ್ರಭುತ್ವವನ್ನು ಬಲಪಡಿಸಬೇಕೆಂದು ಒತ್ತಾಯಿಸುವ ಮನವಿಯನ್ನು ಸಲ್ಲಿಸಿದರು. ಪ್ರತಿಭಟನೆಯಲ್ಲಿ ಜಿಲ್ಲಾ ಸದಸ್ಯರಾದ ತ್ವಾಹಾ ಉಪ್ಪಿನಂಗಡಿ, ಇರ್ಫಾನ್ ಪುಂಜಾಲಕಟ್ಟೆ, ಆಸೀಪ್ ಮಡಂತ್ಯಾರ್, ಅಶ್ಪಾಕ್ ಕಾವಳ್‌ಕಟ್ಟೆ , ಸುಹ್ಯೆಲ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.