ಮೂಡುಬಿದಿರೆ : ಪುರಸಭೆಯಿಂದ ಅಡುಗೆ ಅನಿಲ ಸ್ಟೌವ್ ವಿತರಣೆ
ಮೂಡುಬಿದಿರೆ: ಇಲ್ಲಿನ ಪುರಸಭೆಯ ವತಿಯಿಂದ 65 ಮಂದಿ ಫಲಾನುಭವಿಗಳಿಗೆ ಶನಿವಾರ ಉಚಿತ ಅಡುಗೆ ಅನಿಲ ಹಾಗೂ ಸ್ಟೌವ್‌ವನ್ನು ಸಚಿವ ಕೆ.ಅಭಯಚಂದ್ರ ಜೈನ್ ವಿತರಿಸಿದರು. ನಂತರ ಮಾತನಾಡಿದ ಅವರು ಒಂದು ಸಾವಿರಕ್ಕೂ ಅಧಿಕ ಬಿ.ಪಿ.ಎಲ್,ಪರಿಶಿಷ್ಟ ಜಾತಿ, ಪಂಗಡದವರಿಗೆ ಅಡುಗೆ ಅನಿಲ ಹಾಗೂ ಸ್ಟೌ ನೀಡುವ ಮೂಲಕ ಮೂಡುಬಿದಿರೆ ಪುರಸಭೆಯು ಸೀಮೆ ಎಣ್ಣೆ ಮುಕ್ತ ಪುರಸಭೆಯನ್ನಾಗಿಸುವಲ್ಲಿ ಮಹತ್ವದ ಕಾರ್ಯ ಮಾಡಿದೆ. ಪುರಸಭೆಯಿಂದ ಉಚಿತವಾಗಿ ಪಡೆದ ಅಡುಗೆ ಅನಿಲವನ್ನು ಅಡುಗೆಗೆ ಮಾತ್ರ ಬಳಕೆ ಮಾಡಬೇಕು. ಅನ್ಯ ಉದ್ದೇಶಕ್ಕೆ ಬಳಕೆ ಮಾಡಬಾರದು ಎಂದು ಹೇಳಿದರು. ಪುರಸಭಾಧ್ಯಕ್ಷೆ ರೂಪಾ ಸಂತೋಷ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಶಕುಂತಳಾ ದೇವಾಡಿಗ, ಮೂಡಾದ ಅಧ್ಯಕ್ಷ ಸುರೇಶ್ ಕೋಟ್ಯಾನ್, ಹೆಚ್.ಪಿ ಗ್ಯಾಸ್ ಏಜೆನಿ ಮಾಲಕ ಅಭಿಜಿತ್ ಎಂ. ಮುಖ್ಯಾಧಿಕಾರಿ ಶೀನ ನಾಯ್ಕಾ, ಸ್ಥಾಯೀ ಸಮಿತಿ ಅಧ್ಯಕ್ಷ ಕೊರಗಪ್ಪ, ಪುರಸಭಾ ಸದಸ್ಯರಾದ ಬಶೀರ್, ರಾಜೇಶ್ ಕೋಟೆಗಾರ್ ಮಾಜಿ ಅದ್ಯಕ್ಷ ರತ್ನಾಕರ ದೇವಾಡಿಗ ಉಪಸ್ಥಿತರಿದ್ದರು.ಶೀನಾ ನಾಯ್ಕಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.