×
Ad

ಪ್ರತ್ಯೇಕ ಪ್ರಕರಣ: ಮೂವರ ಆತ್ಮಹತ್ಯೆ

Update: 2016-03-26 23:04 IST

 ಹೆಬ್ರಿ, ಮಾ.26: ವೈಯಕ್ತಿಕ ಕಾರಣದಿಂದ ಮನನೊಂದ ನಾಲ್ಕೂರು ಗ್ರಾಮದ ಕಜ್ಕೆ ಅರಮನೆಜೆಡ್ಡು ನಿವಾಸಿ ಸೂರ್ಯ ನಾಯ್ಕೆ(45) ಎಂಬವರು ಮಾ.25ರಂದು ಮನೆಯ ಗೋಡೆಯ ಬಾಗಿಲಿನ ಮೇಲಿನ ಕಲ್ಲಿನ ದಾರಂದಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿರ್ವ: ಅನಾರೋಗ್ಯದಿಂದ ಬಳಲುತ್ತಿದ್ದ ಮಟ್ಟಾರ್ ಬಂಗ್ಲೆಗುಡ್ಡೆಯ ಗಂಗಾಧರ ಪೂಜಾರಿ(40) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ಮಾ.25ರಂದು ಸಂಜೆ ವೇಳೆ ಮಟ್ಟಾರ್ ಮಲ್ಲಮಾರ್‌ನಲ್ಲಿರುವ ತಾಯಿ ಮನೆ ಸಮೀಪದ ಹಾಡಿಯಲ್ಲಿ ಆವರಣ ಇಲ್ಲದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಣಿಪಾಲ: ದೊಡ್ಡಣಗುಡ್ಡೆಯ ನೇಕಾರ ಕಾಲೋನಿಯ ನಿವಾಸಿ ಗೋಪಾಲ ಶೆಟ್ಟಿಗಾರ್ (72) ಎಂಬವರು ಮಾ.26ರಂದು ಬೆಳಗ್ಗೆ ಮನೆಯ ಸ್ನಾನಗೃಹದ ಮಾಡಿನ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News