×
Ad

ಚಿನ್ನಾಭರಣ ಕಳವು ಆರೋಪಿಗಳ ಸೆರೆ

Update: 2016-03-26 23:06 IST

ಕೋಟ, ಮಾ.26: ಕಳವು ಮಾಡಿದ ಚಿನ್ನಾಭರಣಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ಕೋಟ ಪೊಲೀಸರು ಮಾ.25ರಂದು ಸಂಜೆ ವೇಳೆ ಕೋಟ ಪರಮೇಶ್ವರ ಆಚಾರ್ಯ ಜ್ಯುವೆಲ್ಲರ್ಸ್‌ ಸಮೀಪ ಬಂಧಿಸಿದ್ದಾರೆ.

ಬಂಧಿತರನ್ನು ಹೊನ್ನಾವರದ ಕುಮಾರ ಮಾರಿಯಪ್ಪಜಲಗಾರ(38) ಹಾಗೂ ಮಹಾರಾಷ್ಟ್ರ ಕೊಲ್ಲಾಪುರದ ಲಕ್ಷ್ಮಣ ಯಾನೆ ವಸಂತ(45) ಎಂದು ಗುರುತಿಸಲಾಗಿದೆ. ಇವರಿಬ್ಬರು ಸುಮಾರು 11 ವರ್ಷಗಳ ಹಿಂದೆ ಕುಂದಾಪುರ ಕೋಣಿ ಜ್ಯುವೆಲ್ಲರಿ ವರ್ಕ್‌ಶಾಪ್ ಬಳಿ ಕಳವುಗೈದಿದ್ದ ಚಿನ್ನಾಭರಣಗಳನ್ನು ಕೋಟ ಹೈಸ್ಕೂಲ್ ಸಮೀಪದ ಜ್ಯುವೆಲ್ಲರಿಗೆ ಮಾರಾಟ ಮಾಡಲು ಬಂದಿದ್ದು, ಅಂಗಡಿಯವರು ಇವರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರು. ಅದರಂತೆ ಕಾರ್ಯಾಚರಣೆ ನಡೆಸಿದ ಕೋಟ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಇವರಿಂದ ಚಿನ್ನದ ಗಟ್ಟಿ, ಚಿನ್ನದ ಗೋಲಿ, ಬೆಳ್ಳಿಯ ತುಂಡುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇವುಗಳ ಒಟ್ಟು ಮೌಲ್ಯ 66,000 ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News