ನೇಪಾಳ ಭೂಕಂಪಗಳಿಂದಾಗಿ ಎವರೆಸ್ಟ್‌ನಲ್ಲಿ ಭಾರೀ ಬಿರುಕು

Update: 2016-03-26 18:08 GMT

ಕಠ್ಮಂಡು, ಮಾ.26: ಕಳೆದ ವರ್ಷ ನೇಪಾಳದಲ್ಲಿ 9 ಸಾವಿರಕ್ಕೂ ಅಧಿಕ ಮಂದಿಯನ್ನು ಬಲಿತೆಗೆದುಕೊಂಡ ಭೀಕರ ಭೂಕಂಪದಿಂದಾಗಿ ವೌಂಟ್ ಎವರೆಸ್ಟ್ ಪ್ರದೇಶದಲ್ಲಿ ಹಲವಾರು ಬಿರುಕುಗಳು ಹಾಗೂ ರಂಧ್ರಗಳು ಉಂಟಾಗಿವೆಯೆಂದು ತಜ್ಞರ ತಂಡವೊಂದು ತಿಳಿಸಿದೆ.

ಕಳೆದ ವರ್ಷ ಎಪ್ರಿಲ್ 25 ಹಾಗೂ ಮೇ ತಿಂಗಳಲ್ಲಿ ಸಂಭವಿಸಿದ ಭಾರೀ ಭೂಕಂಪಗಳು ಹಾಗೂ ಪಶ್ಚಾತ್ ಕಂಪನಗಳಿಂದಾಗಿ ಎವರೆಸ್ಟ್ ಪ್ರದೇಶಕ್ಕೆ ಹಾನಿಯುಂಟಾಗಿದೆ ಯೆಂದು ನೇಪಾಳ ಪರ್ವತಾ ರೋಹಿಗಳ ಸಂಘದ ಅಧ್ಯಕ್ಷ ಆಂಗ್ ಶೆರಿಂಗ್ ಶೆರ್ಪಾ ತಿಳಿಸಿದ್ದಾರೆ.

ಪರ್ವತದ ಇಳಿಜಾರುಗಳಲ್ಲಿ ಬಿರುಕುಗಳು ಹಾಗೂ ರಂಧ್ರಗಳು ಉಂಟಾಗಿರುವುದಾಗಿ ಪರ್ವತಾರೋಹಿಗಳಿಗೆ ಆರೋಹಣಕ್ಕೆ ಹಗ್ಗಗಳನ್ನು ಹಾಗೂ ಏಣಿಗಳನ್ನು ಸ್ಥಾಪಿಸಿಕೊಡುವ ಶೆರ್ಪಾಗಳು ತಿಳಿಸಿದ್ದಾರೆಂದು ಆಂಗ್ ಹೇಳಿದ್ದಾರೆ. ಕಳೆದ ವರ್ಷ ಸಂಭವಿಸಿದ ಎರಡು ಭೀಕರ ಭೂಕಂಪಗಳ ಬಳಿಕ ಎವರೆಸ್ಟ್ ಪ್ರಾಂತ್ಯದಲ್ಲಿ 4 ರಿಕ್ಟರ್‌ಸ್ಕೇಲ್ ತೀವ್ರತೆಯ 440 ಪಶ್ಚಾತ್‌ಕಂಪನಗಳು ಸಂಭವಿಸಿರುವುದಾಗಿ ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News