×
Ad

ಅಂಬೇಡ್ಕರ್‌ಗೆ ನೊಬೆಲ್: ಪಾಸ್ವಾನ್ ಆಗ್ರಹ

Update: 2016-03-26 23:54 IST

ಮುಂಬೈ, ಮಾ.26: ದಲಿತ ನಾಯಕ ಬಾಬಾ ಸಾಹೇಬ್ ಅಂಬೇಡ್ಕರರಿಗೆ ಶಾಂತಿ ನೊಬೆಲ್ ಪ್ರಶಸ್ತಿ ನೀಡುವಂತೆ ಕೇಂದ್ರ ಸಚಿವ ರಾಮ್‌ವಿಲಾಸ್ ಪಾಸ್ವಾನ್ ಇಂದು ಒತ್ತಾಯಿಸಿದ್ದಾರೆ.
ಬಾಬಾ ಸಾಹೇಬ್ ಅಂಬೇಡ್ಕರ್ ನೊಬೆಲ್ ಪ್ರಶಸ್ತಿಗೆ ಅರ್ಹರಾಗಿದ್ದಾರೆ. ಅವರನ್ನು ಮಾರ್ಟಿನ್ ಲೂಥರ್ ಕಿಂಗ್ ಹಾಗೂ ನೆಲ್ಸನ್ ಮಂಡೇಲರಂತೆಯೇ ಗೌರವಿಸಬೇಕೆಂದು ಅವರು ಹೇಳಿದ್ದಾರೆ.
ಬಡವರು ಮತ್ತು ದಮನಿತರ ಏಳ್ಗೆಗಾಗಿ ಭಾರೀ ಕೆಲಸ ಮಾಡಿರುವ ಅಂಬೇಡ್ಕರ್‌ರಿಗೆ ನೊಬೆಲ್ ಬಹುಮಾನ ಲಭಿಸುವುದನ್ನು ಖಚಿತಪಡಿಸುವುದು ಇಂದಿನಿಂದ ತನ್ನ ಅಭಿ ಯಾನವಾಗಿರುತ್ತದೆಂದು ಪಾಸ್ವಾನ್ ಘೋಷಿಸಿದ್ದಾರೆ.
ಅಂಬೇಡ್ಕರರಿಗೆ ನೊಬೆಲ್ ಪ್ರಶಸ್ತಿ ಪ್ರದಾನಿಸು ವಂತೆ ನಡೆಸುವ ಅಭಿಯಾನದಲ್ಲಿ ಗರಿಷ್ಠ ಸಾರ್ವ ಜನಿಕ ಜಾಗೃತಿ ಹಾಗೂ ಭಾಗವಹಿಸುವಿಕೆಯನ್ನು ಖಚಿತಪಡಿಸುವಂತೆ ಎಲ್‌ಜೆಪಿಯ ಸ್ಥಾಪಕ ತನ್ನ ಕಾರ್ಯಕರ್ತರನ್ನು ಒತ್ತಾಯಿಸಿದ್ದಾರೆ.
ಪಾಸ್ವಾನ್, ದಲಿತ್ ಇಂಡಿಯಾ ಛೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿಯ ಸಮ್ಮೇಳನಕ್ಕಾಗಿ ಇಂದು ಮುಂಬೈಗೆ ಬಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News