×
Ad

ಪಕ್ಷದ ಕಾರ್ಯಕರ್ತೆಯೊಂದಿಗೆ ಅಶ್ಲೀಲ ವರ್ತನೆ ಆರೋಪ: ಮುಂಬೈ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ರಾಜಿನಾಮೆ!

Update: 2016-03-27 13:00 IST

ಹೊಸದಿಲ್ಲಿ, ಮಾರ್ಚ್.27: ಮುಂಬೈ ಬಿಜೆಪಿ ಯುವಮೋರ್ಚಾದ ಅಧ್ಯಕ್ಷ ಗಣೇಶ್ ಪಾಂಡ್ಯ ಎಂಬಾತ ಪಕ್ಷದ ಮಹಿಳಾಕಾರ್ಯಕರ್ತೆಯೊಬ್ಬರೊಂದಿಗೆ ಅಶ್ಲೀಲವಾಗಿ ವರ್ತಿಸಿದ್ದಾರೆಂದು ಆರೋಪಿಸಲಾಗಿದೆ. ಆನಂತರ ಪಾಂಡ್ಯ ರಾಜಿನಾಮೆಯನ್ನು ನೀಡಿದ್ದಾರೆಂದು ವರದಿಯಾಗಿದೆ. ಮಾರ್ಚ್ 4ರಂದು ಬಿಜೆಪಿ ಮಥುರಾದ ರಾಷ್ಟ್ರೀಯ ಕಾರ್ಯಕಾರಿಣಿಯ ಮೂರುದಿವಸಗಳ ಬೈಠಕ್ ಸಂದರ್ಭದಲ್ಲಿ ಈ ಪ್ರಕರಣ ನಡೆದಿತ್ತೆನ್ನಲಾಗಿದ್ದು ಆವೇಳೆ ಮಹಿಳೆ ಮರುದಿವಸದ ಕಾರ್ಯಕ್ರಮಕ್ಕೆ ತಯಾರಿ ನಡೆಸುತ್ತಿದ್ದಳು ಎಂದು ತಿಳಿದು ಬಂದಿದೆ.

ಈ ಮಹಿಳೆ ಮುಂಬೈ ಬಿಜೆಪಿ ಅಧ್ಯಕ್ಷ ಆಶೀಷ್ ಶೆಲಾರ್‌ರಿಗೆ ಪತ್ರ ಬರೆದು ಗಣೇಶ್ ಪಾಂಡ್ಯ ವಿರುದ್ಧ ದೂರಿತ್ತಿದ್ದಳು. " ಪಕ್ಷದ ಯೂತ್ ವಿಂಗ್ ಅಧ್ಯಕ್ಷ ಗಣೇಶ್ ಪಾಂಡ್ಯ ರಾತ್ರಿಯ ವೇಳೆ ತನ್ನನ್ನು ಅವರ ಕೋಣೆಗೆ ಕರೆಯಿಸಿಕೊಂಡರು. ಕೋಣೆಯಲ್ಲಿ ಪಾಂಡ್ಯ ಇತರರ ಜೊತೆ ಶರಾಬು ಕುಡಿಯುತ್ತಿದ್ದರು. ಅಲ್ಲಿ ಪಾಂಡ್ಯ ಕೆಟ್ಟ ಪ್ರಶ್ನೆಯನ್ನು ಕೊಳಕು ಮಾತುಗಳನ್ನಾಡಿದ್ದಾರೆ. ತಾನು ಹೊರಬರಲು ಸಿದ್ಧಳಾದಾಗ ತನ್ನ ಕೈಯನ್ನು ಹಿಡಿದು ನಿಲ್ಲಿಸಲು ಪ್ರಯತ್ನಿಸಿದ್ದಾರೆ" ಎಂದು ಕಾರ್ಯಕರ್ತೆ ಅಲವತ್ತುಕೊಂಡಿದ್ದಾಳೆ.

ಪೀಡನೆಗೊಳಗಾದ ಯುವತಿಯನ್ನು ಅವಳ ಕೋಣೆಯವರೆಗೂ ಪಾಂಡ್ಯ ಮತ್ತು ಅವನ ಗೆಳೆಯರು ಹಿಂಬಾಲಿಸಿದ್ದರೆಂದು ಪತ್ರದಲ್ಲಿ ತಿಳಿಸಲಾಗಿದೆ. ಪಾಂಡ್ಯ ತನ್ನ ಗೆಳೆಯರೊಂದಿಗೆ ಅಶ್ಲೀಲ ವೀಡಿಯೊವನ್ನು ಕೂಡ ಚಾಲೂ ಮಾಡಿದ್ದ. ಅದು ಕೂಡಾ ದೊಡ್ಡ ಧ್ವನಿಯಲ್ಲಿತ್ತು ಎಂದು ಮಹಿಳೆ ಪತ್ರದಲ್ಲಿ ಬರೆದಿದ್ದಾಳೆ. ಪಾಂಡ್ಯನನ್ನು ಸ್ಪರ್ಶಿಸಬೇಕೆಂದು ಆತ ಧಮ್ಕಿಹಾಕಿದ್ದನೆಂದೂ ಮಹಿಳೆಪತ್ರದಲ್ಲಿ ತಿಳಿಸಿದ್ದಾಳೆಂದು ವರದಿಯಾಗಿದೆ.

ಶೆಲಾರ್‌ರು ಪಾಂಡ್ಯನ ರಾಜಿನಾಮೆಯನ್ನು ಸ್ವೀಕರಿಸಿದ್ದು ಮುಂಬೈ ಯುವಮೋರ್ಚಾ ಯುನಿಟ್‌ನ್ನು ವಿಸರ್ಜಿಸಲಾಗಿದೆ ಎಂದು ಹೇಳಿದ್ದಾರೆ. ಮುಂದೆ ಇಂತಹ ಘಟನೆಗಳಾಗದಂತೆ ಎಚ್ಚರಿಕೆ ವಹಿಸಲಾಗುವುದೆಂದು ಹೇಳಿರುವುದಾಗಿ ವರದಿಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News