24 ವರ್ಷಗಳಾದರೂ ಪ್ರಗತಿಕಾಣದ ಕೇರಳದ ಸಿಸ್ಟರ್ ಅಭಯಾ ಸಾವು ಪ್ರಕರಣ
ಕೊಟ್ಟಾಯಂ, ಮಾರ್ಚ್. 27: ಕೇರಳದಲ್ಲಿ ಕೋಲಾಹಲ ಸೃಷ್ಟಿಸಿದ್ದ ಸಿಸ್ಟರ್ ಅಭಯಾ ಸಾವು ಪ್ರಕರಣಕ್ಕೆ ಇಂದಿಗೆ 24 ವರ್ಷ ಪೂರ್ಣಗೊಂಡಿದೆ. ಕೊಟ್ಟಾಯಂ ಪಯಸ್ ಟೆನ್ತ್ ಕಾನ್ವೆಂಟ್‌ನ ಬಾವಿಯಲ್ಲಿ ಮೃತರಾದ ನೆಲೆಯಲ್ಲಿ ಸಿ. ಅಭಯಾ ಪತ್ತೆಯಾಗಿದ್ದರು. ಅಭಯರದ್ದು ಆತ್ಮಹತ್ಯೆಮತ್ತುಕೊಲೆಪಾತಕ ಎಂಬ ಎರಡು ವಾದಗಳು ಹುಟ್ಟಿಕೊಂಡ ಹಿನ್ನೆಯಲ್ಲಿ ತೀವ್ರವಿವಾದ ಗರಿಕೆದರಿಕೊಂಡಿತ್ತು.
ಮರಣ ಆತ್ಮಹತ್ಯೆಯಿಂದ ಸಂಭವಿಸಿದೆ ಎಂದು ಸ್ಥಳೀಯ ಪೊಲೀಸರು ಕೇಸು ಮುಚ್ಚಿದ್ದರು.ಆದರೆ ಅಂದಿನ ಕೊಟ್ಟಾಯಂ ನಗರಸಭೆ ಚೇರ್‌ಮೆನ್ ಪಿಸಿ ಚೆರಿಯನ್ ಮಡುಕ್ಕನಿಯವರ ಅಧ್ಯಕ್ಷತೆ ಮತ್ತು ಜೋಮೋನ್ ಪುತ್ತನ್ ಪುರ ಕನ್ವೀನರ್ ಆಗಿ ಆಕ್ಷನ್ ಕೌನ್ಸಿಲ್ ರೂಪೀಕರಣವಾಗಿ ಪ್ರಕರಣಕ್ಕೆ ತಿರುವು ಬಂದಿತ್ತು. ತನಿಖೆಯನ್ನು ಕ್ರೈಂ ಬ್ರಾಂಚ್‌ಗೆ ವರ್ಗಾಯಿಸಲಾಗಿತ್ತು. ಅದು ಕೂಡಾ ಅಭಯಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ನಿರ್ಧರಿಸಿತ್ತು. ಆನಂತರ 1993 ಮಾರ್ಚ್ 29ಕ್ಕೆ ತನಿಖೆಯನ್ನು ಸಿಬಿಐ ವಹಿಸಿಕೊಂಡಿತು. ಸಾಕ್ಷಿಗಳಿಲ್ಲ ಎಂಬ ಕಾರಣದಿಂದ ಆರೋಪಿಗಳನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ ಎಂದು 1996ರಲ್ಲಿ ತನಿಖೆ ಮುಕ್ತಾಯಗೊಳಿಸಲು ಸಿಬಿಐ ನ್ಯಾಯಾಲಯದ ಅನುಮತಿ ಯಾಚಿಸಿತ್ತು. ಆದರೆ ಕೋರ್ಟ್ ತಿರಸ್ಕರಿಸಿತ್ತು. ನಂತರ 1999ರಲ್ಲಿ ಮತ್ತು 2005ರಲ್ಲಿ ಇದೇ ಬೇಡಿಕೆಯನ್ನು ಮುಂದಿಟ್ಟರೂ ತನಿಖೆ ನಡೆಸಬೇಕೆಂದು ಕೋರ್ಟು ಆದೇಶಿಸಿತ್ತು.
ಪುನಃ ನಡೆಸಿದ ತನಿಖೆಯಲ್ಲಿ ಫಾ. ಥಾಮಸ್ ಎಂ.ಕೊಟ್ಟೂರ್, ಫಾ. ಜೋಸ್ ಪೂತೃಕ್ಕಯಿಲ್, ಸಿಸ್ಟರ್ ಸ್ಟೆಫಿ ಮುಂತಾದವರನ್ನು 2008ರ ನವೆಂಬರ್ 18ಕ್ಕೆ ಸಿಬಿಐ ಬಂಧಿಸಿತ್ತು. ಈ ನಡುವೆ ಸಿಬಿಐ ಪ್ರಶ್ನಿಸಿದ ಮಾಜಿ ತನಿಖಾಧಿಕಾರಿ ವಿ. ವಿ. ಆಗಸ್ಟಿನ್ ಆತ್ಮಹತ್ಯೆ ಮಾಡಿಕೊಂಡರು. 2009ರ ಜುಲೈ 17ಕ್ಕೆ ತಿರುವನಂತಪುರಂ ಸಿಬಿಐ ಕೋರ್ಟ್‌ನಲ್ಲಿ ಸಲ್ಲಿಸಿದ ಆರೋಪಪತ್ರದಂತೆ ಆರೋಪಿಗಳು ವಿಚಾರಣೆಯನ್ನು ಎದುರಿಸುತ್ತಿದ್ದಾರೆ. ಸಿಬಿಐಯ ಆರೋಪಪತ್ರ ವಜಾಗೊಳಿಸಬೇಕೆಂದು ಕ್ರೈಂಬ್ರಾಂಚ್ ಅಧಿಕಾರಿಯಾಗಿದ್ದ ಕೆ.ಟಿ.ಮೈಕಲ್ ಸಲ್ಲಿಸಿದ ಅರ್ಜಿಯಲ್ಲಿ ಎಪ್ರಿಲ್ 25ಕ್ಕೆ ಕೋರ್ಟ್ ತೀರ್ಪು ನೀಡಲಿದೆ. 23ವರ್ಷ ತನಿಖೆ ನಡೆಸಿದ ಕೊಲೆಪ್ರಕರಣ ಸಿಬಿಐಯ ಇತಿಹಾಸದಲ್ಲಿ ಇದೇ ಮೊದಲನೆಯದೆಂದು ಜೋಮೋನ್ ಪುತ್ತನ್‌ಪುರಕ್ಕಲ್ ಹೇಳಿದ್ದಾರೆಂದು ವರದಿಯಾಗಿದೆ.