×
Ad

ಹೈದರಾಬಾದ್ ವಿಶ್ವವಿದ್ಯಾನಿಲಯ: ಹೋರಾಟ ದಿಲ್ಲಿಗೆ ವ್ಯಾಪಿಸುತ್ತಿದೆ!

Update: 2016-03-27 13:29 IST

ಹೊಸದಿಲ್ಲಿ, ಮಾರ್ಚ್.27: ಸಂಶೊಧನಾ ವಿದ್ಯಾರ್ಥಿ ರೋಹಿತ್ ವೇಮುಲಾರ ಆತ್ಮಹತ್ಯೆಪ್ರಕರಣದಲ್ಲಿ ನ್ಯಾಯಕ್ಕಾಗಿ ಹೈದರಾಬಾದ್ ವಿಶ್ವವಿದ್ಯಾನಿಲಯದಲ್ಲಿ ನಡೆಯುತ್ತಿರುವ ಪ್ರತಿಭಟನೆ ದಿಲ್ಲಿಗೆ ವ್ಯಾಪಿಸುವಂತೆ ಮಾಡಲು ವಿದ್ಯಾರ್ಥಿ- ಪ್ರಜಾ ಹಕ್ಕು ಸಂಘಟನೆಗಳು ತೀರ್ಮಾನಿಸಿವೆಯೆಂದು ವರದಿಯಾಗಿದೆ.

 ಘಟನೆಯಲ್ಲಿ ಭಾಗಿಯಾದ ಕೇಂದ್ರಸರಕಾರದ ಸಚಿವರ ವಿರುದ್ಧ ಕ್ರಮವನ್ನು ಕೈಗೊಳ್ಳಬೇಕೆಂದು ಆಗ್ರಹಿಸಿ ದಿಲ್ಲಿಯಲ್ಲಿ ಪ್ರತಿಭಟನೆ ನಡೆದಿತ್ತು.ಜವಾಹರಲಾಲ್ ನೆಹರೂ ಯುನಿವರ್ಸಿಟಿಯ ವಿವಾದಗಳು ಮತ್ತು ಬಂಧನ ಸತ್ರಗಳು ನಡೆದ್ದದ್ದರಿಂದಾಗಿ ಹೋರಾಟ ದಿಕ್ಕು ಬದಲಾಗಿತ್ತು. ಹೈದರಾಬಾದ್‌ನಲ್ಲಿ ಇಷ್ಟು ವಿದ್ಯಾರ್ಥಿಗಳು ಬಂಧಿಸಲ್ಪಟಿದ್ದರೂ ಪ್ರಜಾ ಸಮೂಹ ಮತ್ತು ಮಾಧ್ಯಮಗಳು ಜಾಗೃತವಾಗಿಲ್ಲ ಎಂಬ ವ್ಯಾಪಕ ದೂರುಗಳು ಎದ್ದಿದ್ದು ದಿಲ್ಲಿಗೆ ಹೋರಾಟವನ್ನು ವರ್ಗಾಯಿಸಲು ಯೋಚಿಸಲಾಗುತ್ತಿದೆಯೆಂದು ತಿಳಿದು ಬಂದಿದೆ. ಶನಿವಾರ ದಿಲ್ಲಿಯಲ್ಲಿ ತೆಲಂಗಾಣ ಭವನದಲ್ಲಿ ಬಿರ್ಸಾ ಅಂಬೇಡ್ಕರ್ ಫುಲೆ ಸ್ಟೂಡೆಂಟ್ಸ್ ಅಸೋಸಿಯೇಶನ್ ಮಾರ್ಚ್ ನಡೆಸಿದೆ. ಜೆಎನ್‌ಯು ವಿದ್ಯಾರ್ಥಿ ಯೂನಿಯನ್‌ನ ಬೆಂಬಲದೊಂದಿಗೆ ನಡೆದ ಮಾರ್ಚ್‌ನ್ನು ಪೊಲೀಸರು ತಡೆದರು. ಶನಿವಾರ ಬೆಳಗ್ಗೆ ಜಂತರ್ ಮಂತರ್‌ನಲ್ಲಿ ಕ್ಯಾಂಪಸ್ ಪ್ರಜಾಪ್ರಭುತ್ವಕ್ಕಾಗಿ ಮಾರ್ಚ್ ಆರಂಭವಾಗಿತ್ತು. ಸೋಮವಾರ ವಿದ್ಯಾರ್ಥಿ ಸಂಘಟನೆಗಳು ರಾಷ್ಟ್ರೀಯ ಮಾನವ ಹಕ್ಕು ಆಯೋಗದ ಕೇಂದ್ರಕ್ಕೆ ಸಾಮೂಹಿಕ ಮನವಿಯ ಮಾರ್ಚ್‌ನ್ನು ನಡೆಸಲಾಗುವುದೆಂದು ಘೋಷಿಸಿವೆ. ಈ ವಿಷಯದಲ್ಲಿ ಮಾನವಹಕ್ಕು ಆಯೋಗ ಸ್ವಯಂ ಮಧ್ಯಪ್ರವೇಶಿಸಿದೆ. ಈ ತಿಂಗಳು 30ಕ್ಕೆ ಮಂಡಿಹೌಸ್‌ನಿಂದ ರಾಷ್ಟ್ರಪತಿ ಭವನಕ್ಕೆ ಮಾರ್ಚ್ ನಡೆಸಲಾಗುವುದೆಂದು ಜಾಯಿಂಟ್ ಆಕ್ಷನ್ ಕೌನ್ಸಿಲ್ ತೀರ್ಮಾನಿಸಿದೆ ಎಂದು ವರದಿಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News