ನೀರಿನ ಸಂರಕ್ಷಣೆಯ ಅಗತ್ಯವಿದೆ: 'ಮನ್‌ಕೀ ಬಾತ್'ನಲ್ಲಿ ಮೋದಿ ಕರೆ
ಹೊಸದಿಲ್ಲಿ, ಮಾ.27: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ರವಿವಾರ ಪ್ರಸಾರವಾದ ತಮ್ಮ 18ನೆ ಆವೃತ್ತಿಯ 'ಮನ್‌ಕೀ ಬಾತ್' ರೇಡಿಯೋ ಕಾರ್ಯಕ್ರಮದಲ್ಲಿ ನೀರು ಸಂರಕ್ಷಣೆ ವಿಷಯವನ್ನು ಪ್ರಸ್ತಾವಿಸಿದ್ದಾರೆ.
''ಇದು ರೈತರಿಗೆ ಅತ್ಯಂತ ಪ್ರಮುಖ ಸಮಯವಾಗಿದೆ. ಎಲ್ಲರೂ ನೀರು ಸಂರಕ್ಷಣೆಯ ಬಗ್ಗೆ ಚಿಂತನೆ ನಡೆಸಬೇಕಾಗಿದೆ. ನೀರಿನ ಅಂತರ್ಜಲ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಈ ಹಿನ್ನೆಲೆಯಲ್ಲಿ ನೀರಿನ ಸಂರಕ್ಷಣೆ ಅಗತ್ಯವಿದೆ. ಈ ನಿಟ್ಟಿನಲ್ಲಿ ಹೆಚ್ಚಿನ ಶ್ರಮ ಅಗತ್ಯವಿದೆ. ರೈತರಿಗೆ ನೆರವಾಗಲು ಕಿಶಾನ್ ಸುವಿಧಾ ಆ್ಯಪ್‌ನ್ನು ಅನಾವರಣಗೊಳಿಸಲಾಗುತ್ತದೆ'' ಎಂದು ಮೋದಿ ತಿಳಿಸಿದರು.
ಭಾರತ 2017ರಲ್ಲಿ ಅಂಡರ್-17 ಫುಟ್ಬಾಲ್ ವಿಶ್ವಕಪ್‌ನ ಆತಿಥ್ಯವಹಿಸಲಿದೆ ಎಂದು ತಿಳಿಸಿದ ಮೋದಿ, ''ಭಾರತ ಒಂದು ಕಾಲದಲ್ಲಿ ಉತ್ತಮ ಫುಟ್ಬಾಲ್ ತಂಡವಾಗಿತ್ತು. ಇದೀಗ ನಾವು ರ್ಯಾಂಕಿಂಗ್‌ನಲ್ಲಿ ಕುಸಿದಿದ್ದೇವೆ. ಉತ್ತಮ ಕ್ರೀಡಾ ಮೂಲಭೂತ ಸೌಲಭ್ಯದ ಒದಗಿಸಿ ಅವಕಾಶವನ್ನು ಸೃಷ್ಟಿಸಬೇಕಾಗಿದೆ. ಪ್ರತಿ ಹಳ್ಳಿಗಳಿಗೂ ಫುಟ್ಬಾಲ್‌ನ್ನು ತಲುಪಿಸುವ ಅವಶ್ಯಕತೆ ಇದೆ'' ಎಂದು ಮೋದಿ ಕರೆ ನೀಡಿದರು.