ಪೂಂಜಾಲಕಟ್ಟೆ: ಮಾ.28ರಂದು ‘ಏಕತೆಯೇ ಭದ್ರತೆ’ ಕಾರ್ಯಕ್ರಮ
Update: 2016-03-27 16:17 IST
ಬಂಟ್ವಾಳ, ಮಾ.27: ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ಹಮ್ಮಿಕೊಂಡಿರುವ ಏಕತಾ ಅಭಿಯಾನದ ಪ್ರಯುಕ್ತ ಕೌನ್ಸಿಲ್‌ನ ಪೂಂಜಾಲಕಟ್ಟೆ ಸಮಿತಿಯ ಆಶ್ರಯದಲ್ಲಿ ‘ಏಕತೆಯೇ ಭದ್ರತೆ’ ಎಂಬ ಕಾರ್ಯಕ್ರಮವು ಮಾ.28ರಂದು ಸಂಜೆ 7ಕ್ಕೆ ಪೂಂಜಾಲಕಟ್ಟೆ ಮಸೀದಿ ಬಳಿ ನಡೆಯಲಿದೆ.
ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್‌ನ ರಾಜ್ಯ ಉಪಾಧ್ಯಕ್ಷ ಸೈಯದ್ ಇಬ್ರಾಹೀಂ ಅಲ್‌ಹಾದಿ ತಂಙಳ್‌ರ ದುಆದೊಂದಿಗೆ ಆರಂಭಗೊಳ್ಳುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೌನ್ಸಿಲ್‌ನ ರಾಜ್ಯ ಕಾರ್ಯದರ್ಶಿ ಜಾಫರ್ ಸಾದಿಕ್ ವಹಿಸುವರು. ಕೌನ್ಸಿಲ್‌ನ ಕೇರಳ ಉಪಾಧ್ಯಕ್ಷ ಹಾಫಿಲ್ ಅಫ್ಸಲ್ ಖಾಸಿಮಿ ಕೊಲ್ಲಂ ಮುಖ್ಯ ಭಾಷಣ ಮಾಡುವರು. ಪಿಎಫ್‌ಐ ರಾಜ್ಯ ಕಾರ್ಯದರ್ಶಿ ಶಾಫಿ ಬೆಳ್ಳಾರೆ ಪ್ರಾಸ್ತಾವಿಕವಾಗಿ ಮಾತನಾಡುವರು ಎಂದು ಪ್ರಕಟನೆ ತಿಳಿಸಿದೆ.