ಗುಜರಾತ್‌ನಲ್ಲಿ ಜಾನುವಾರುಗಳಿಗೆ ಮದುವೆ!
ಅಹ್ಮದಾಬಾದ್, ಮಾರ್ಚ್.27: ಗೋಸಂರಕ್ಷಣೆಯನ್ನು ಪ್ರೋತ್ಸಾಹಿಸಲಿಕ್ಕಾಗಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಜಾನುವಾರುಗಳ ಮದುವೆ ಸಮಾರಂಭವೊಂದು ಗುಜಾರಾತ್‌ನಲ್ಲಿ ನಡೆದಿರುವುದಾಗಿ ವರದಿಯಾಗಿದೆ. ಭವ್ನಗರ್‌ನಲ್ಲಿ ಲಕ್ಷಾಂತರ ರೂಪಾಯಿ ವಿನಿಯೋಗಿಸಿ ವಿಜಯ್ ಪ್ರಸನ್ನ ಎಂಬ ಉದ್ಯಮಿಯೊಬ್ಬರು ಜಾನುವಾರುಗಳ ವಿವಾಹವನ್ನು ನಡೆಸಿದ್ದಾರೆ. ಪ್ರತಿಯೊಂದು ಮನೆಯಲ್ಲಿಯೂ ದನ ಸಾಕಬೇಕೆಂಬ ಪ್ರಚಾರದೊಂದಿಗೆ ತನ್ನ ದನ ಮತ್ತು ಹೋರಿಯ ವಿವಾಹವನ್ನು ನಡೆಸಿದ್ದಾರೆ ಎನ್ನಲಾಗಿದೆ.
ಪೂನಂ ಎಂಬ ದನವನ್ನು ಅರ್ಜುನ್ ಎಂಬ ಹೋರಿಯೊಂದಿಗೆ ಮದುವೆಮಾಡಿಸಿದ್ದು ಈ ಮದುವೆಯಲ್ಲಿ ನೂರಾರು ಮಂದಿ ಭಾಗವಹಿಸಿದ್ದಾರೆ. ಪರಾಸನ ಚಾರಿಟೇಬಲ್ ಟ್ರಸ್ಟ್ ವಿವಾಹಕ್ಕೆ ನೇತೃತ್ವವನ್ನು ನೀಡಿತ್ತು. ಬಂಗಾರದ ಆಭರಣಗಳನ್ನು ಹಾಕಿಸಿ ಕೆಂಪು ರೇಶ್ಮೆ ಸೀರೆ ತೊಡಿಸಿ ದನವನ್ನು ವೇದಿಕೆಗೆ ಕರೆತರಲಾಗಿತ್ತು. ವರನನ್ನು ವಿವಾಹ ದಿರಿಸಿನಲ್ಲಿ ವೇದಿಕೆ ಕರೆತರಲಾಗಿತ್ತು.
ಬ್ರಾಹ್ಮಣ ಪುರೋಹಿತರು ವಿವಾಹ ಕಾರ್ಯಕ್ರಮಕ್ಕೆ ನೇತೃತ್ವವನ್ನು ಕೊಟ್ಟಿದ್ದರು. ಮಂತ್ರೋಚ್ಚಾರಣೆಗಾಗಿ ಅಹ್ಮದಾಬಾದ್‌ನ ವಿಶ್ವವಿದ್ಯಾನಿಲಯದಿಂದ 150ರಷ್ಟು ವಿದ್ಯಾರ್ಥಿಗಳನ್ನು ಮಂಟಪದಲ್ಲಿ ನಿಲ್ಲಿಸಲಾಗಿತ್ತು. ಗೋಮಾತಾ ಸಂರಕ್ಷಣೆಯ ಪ್ರಾಮುಖ್ಯವನ್ನುಜನರಿಗೆ ತಲುಪಿಸಲಿಕ್ಕಾಗಿ ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತೆಂದು ಸಂಘಟಕರು ಹೇಳಿರುವುದಾಗಿ ವರದಿಗಳು ತಿಳಿಸಿವೆ.