×
Ad

ಕಾಸರಗೋಡು : ನದಿಯಲ್ಲಿ ಮುಳುಗಿ ಇಬ್ಬರು ಮಕ್ಕಳ ಸಾವು

Update: 2016-03-27 18:04 IST

ಕಾಸರಗೋಡು : ಹೊಳೆಯಲ್ಲಿ ಮುಳುಗಿ ಇಬ್ಬರು  ಮಕ್ಕಳು  ಮೃತಪಟ್ಟ ಘಟನೆ  ನೀಲೇಶ್ವರ ಚೋಲಕಡವು ಹೊಳೆ ಯಲ್ಲಿ ನಡೆದಿದೆ.
ಮ್ರತಪತ್ತವರನ್ನು ಚೋಳಕಡವಿನ  ಸತ್ತಾರ್ ರವರ ಪುತ್ರ ನಿಹಾಲ್ (೧೦) ಮತ್ತು ಮುಹಮ್ಮದ್ ರ  ಪುತ್ರ ಅರ್ಫಾಜ್ (೮) ಎಂದು ಗುರುತಿಸಲಾಗಿದೆ.
ಆದಿತ್ಯವಾರ ಸಂಜೆ ಘಟನೆ ನಡೆದಿದೆ ಹೊಳೆಗಿಳಿದ ಸಂದರ್ಭದಲ್ಲಿ  ಮುಳುಗಿದ ಇಬ್ಬರನ್ನು ಸ್ಥಳೀಯರು ಮೇಲಕ್ಕೆತ್ತಿ  ಆಸ್ಪತ್ರೆಗೆ ತಲುಪಿಸಿದರೂ  ಆಗಲೇ ಮ್ರತಪಟ್ಟಿದ್ದರು.
ಮೀನು ಹಿಡಿಯಲೆಂದು ಇಬ್ಬರು ಹೊಳೆಗೆ  ಇಳಿದಿದ್ದರು ಎನ್ನಲಾಗಿದೆ .

ನೀಲೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ   
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News