×
Ad

ಪ್ರಧಾನಿ ಮೋದಿ-ಜೇಟ್ಲಿ ಪೋಸ್ಟರ್‌ಗೆ ಮಸಿ-ಮೊಟ್ಟೆ

Update: 2016-03-27 23:38 IST

ಮೀರತ್, ಮಾ.27: ನಾಲ್ಕು ದಿನಗಳ ಹಿಂದೆ ಇಲ್ಲಿ ನಡೆಡಿದ್ದ ವ್ಯಾಪಾರಿಗಳು ಹಾಗೂ ಚಿನ್ನದ ವ್ಯಾಪಾರಿಗಳ ಪ್ರದರ್ಶನವೊಂದರ ವೇಳೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿಯವರ ಪೋಸ್ಟರ್‌ಗಳಿಗೆ ಮಸಿ ಹಾಗೂ ಮೊಟ್ಟೆಗಳನ್ನು ಎಸೆದ ಆರೋಪದಲ್ಲಿ ಸುಮಾರು 150 ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಭಾರತೀಯ ದಂಡ ಸಂಹಿತೆಯ ಸೆ.147 (ದಂಗೆ), 341 (ತಪ್ಪು, ತಡೆ) ಹಾಗೂ 505ರನ್ವಯ (ಸಾರ್ವಜನಿಕ ಕಿಡಿಗೇತನ) ಇಂದು ಎಫ್‌ಐಆರ್ ದಾಖಲಿಸಲಾಗಿದೆ.
ವ್ಯಾಪಾರಿ ನಾಯಕರಾದ ರಾಜಕುಮಾರ್ ಭಾರದ್ವಾಜ್, ಮೀಟರ್ ಚಿನ್ನದ ವ್ಯಾಪಾರಿಗಳ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಸುರ್ವೇಶ್ ಕುಮಾರ್ ಸರಾಫ್ ಹಾಗೂ ಇತರ ಮೂವರನ್ನು ಎಫ್‌ಐಆರ್‌ನಲ್ಲಿ ಹೆಸರಿಸಲಾಗಿದ್ದು, ಇತರ 145 ಮಂದಿಯನ್ನು ಅಜ್ಞಾತರೆಂದು ನಮೂದಿಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.
ಘಟನೆಗೆ ಸಂಬಂಧಪಟ್ಟ ಇತರರನ್ನು ಗುರುತಿಸುವ ಕಾರ್ಯ ಪ್ರಗತಿಯಲ್ಲಿದೆಯೆಂದು ಅವರು ಹೇಳಿದ್ದಾರೆ.
ಮಾ.23ರಂದು ಹೋಳಿ ಹಬ್ಬದ ಸಂದರ್ಭ ನಗರದ ವರ್ತಕರು ಹಾಗೂ ಚಿನ್ನದ ವ್ಯಾಪಾರಿಗಳು ಪ್ರದರ್ಶನವೊಂದನ್ನು ಆಯೋಜಿಸಿದ್ದರು. ಆ ವೇಳೆ ಬೇಗಂಪೂಲ್‌ನಲ್ಲಿ ಪ್ರಧಾನಿ ಹಾಗೂ ಅರ್ಥ ಸಚಿವರ ಪೋಸ್ಟರ್‌ಗಳಿಗೆ ಶಾಯಿ ಹಾಗೂ ಮೊಟ್ಟೆಗಳನ್ನು ಎಸೆಯಲಾಗಿತ್ತು.

ಇದೇ ವೇಳೆ, ವ್ಯಾಪಾರಿಗಳ ವಿರುದ್ಧದ ಮೊಕದ್ದಮೆಯನ್ನು ಹಿಂದೆಗೆಯದಿದ್ದರೆ, ಪ್ರತಿಭಟನೆ ನಡೆಸುವ ಬೆದರಿಕೆಯನ್ನು ಕಾಂಗ್ರೆಸ್ ಹಾಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News