×
Ad

ದೂರವಾಣಿ ಮೂಲಕ ರೈಲು ಟಿಕೆಟ್ ರದ್ದತಿ

Update: 2016-03-27 23:57 IST

ಹೊಸದಿಲ್ಲಿ, ಮಾ.27: ಮುಂದಿನ ಎಪ್ರಿಲ್‌ನಿಂದ ದೃಢೀಕೃತ ರೈಲು ಟಿಕೆಟನ್ನು ರದ್ದುಗೊಳಿಸುವುದು ಒಂದು ಫೋನ್ ಕರೆಯಿಂದ ಸಾಧ್ಯವಾಗಲಿದೆ.
ದೃಢೀಕೃತ ಟಿಕೆಟುಗಳ ರದ್ದತಿ ಹಾಗೂ ಹಣ ಹಿಂಪಡೆಯಲು ನಿಗದಿತ ಅವಧಿಯೊಳಗೆ ರೈಲ್ವೆ ಕೌಂಟರ್‌ಗೆ ಹೋಗುವುದು ಪ್ರಯಾಣಿಕರಿಗೆ ಕಷ್ಟವಾಗುತ್ತಿರುವ ಕಾರಣ, ಭಾರತೀಯ ರೈಲ್ವೆ ಮುಂದಿನ ತಿಂಗಳು ಅದಕ್ಕೊಂದು ಸೌಲಭ್ಯವನ್ನು ಸ್ಥಾಪಿಸುವ ಸಿದ್ಧತೆಯಲ್ಲಿದೆ.

ರದ್ದುಗೊಳಿಸ ಬೇಕಾದ ದೃಢೀಕೃತ ಟಿಕೆಟ್‌ನ ವಿವರವನ್ನು 139 ಸಂಖ್ಯೆಗೆ ಡಯಲ್ ಮಾಡಿ ನೀಡಬೇಕು. ಆಗ ಕಳುಹಿಸಿದಾತನಿಗೆ ಒಮ್ಮೆ ಬಳಸಬಹುದಾದ ಪಾಸ್‌ವರ್ಡ್ ಒಂದು ದೊರೆಯುತ್ತದೆ.

ಪ್ರಯಾಣಿಕರು ಅದೇ ದಿನ ಕೌಂಟರ್‌ಗೆ ಹೋಗಬೇಕು ಹಾಗೂ ಹಣ ಮರಳಿ ಪಡೆಯಲು ಪಾಸ್‌ವರ್ಡ್ ತಿಳಿಸಬೇಕು ರೈಲ್ವೆ ಸಚಿವಾಲಯದ ಹಿರಿಯಾಧಿಕಾರಿಯೊಬ್ಬರು ವಿವರಿಸಿದ್ದಾರೆ.

ನಿಜವಾದ ಪ್ರಯಾಣಿಕರಿಗೆ ದೃಢೀಕೃತ ಟಿಕೆಟ್ ಲಭಿಸಲು ಸಹಾಯ ಮಾಡುವ ಹಾಗೂ ದಲ್ಲಾಳಿಗಳನ್ನು ದೂರವಿರಿಸುವ ಉದ್ದೇಶದಿಂದ ಹೊಸ ಮರುಪಾವತಿ ನಿಯಮದ ಪ್ರಕಾರ, ರೈಲ್ವೆಯ ಟಿಕೆಟ್ ರದ್ದತಿ ಶುಲ್ಕವನ್ನು ದುಪ್ಪಟ್ಟುಗೊಳಿಸಿದೆ. ಆನ್‌ಲೈನ್‌ನಲ್ಲಿ ಕಾದಿರಿಸಿದ ಟಿಕೆಟನ್ನು ಟಿಕೆಟಿಂಗ್ ವೆಬ್‌ಸೈಟ್‌ನಲ್ಲಿ ರದ್ದುಪಡಿಸಬಹುದು. ಕೌಂಟರ್‌ನಲ್ಲಿ ಟಿಕೆಟ್ ಖರೀದಿಸಿದವರಿಗಾಗಿ 139ರ ಸೌಲಭ್ಯವಿರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News