×
Ad

ಉಳ್ಳಾಲ : ಗ್ರಾಮದ ಅಭಿವೃದ್ಧಿಗೆ ರಾಜ್ಯದಲ್ಲಿಯೇ ಮೊದಲ ಬಾರಿ ಮಂಜನಾಡಿ ಪಂಚಾಯಿತಿಗೆ ಹೆಚ್ಚುವರಿ ಅನುದಾನ

Update: 2016-03-28 18:34 IST

ಉಳ್ಳಾಲ, ಮಾ, 28: ಹೆಚ್ಚು ಜನಸಂಖ್ಯೆ ಇರುವ ಮಂಜನಾಡಿ ಗ್ರಾಮದ ಅಭಿವೃದ್ಧಿಗೆ ರಾಜ್ಯದಲ್ಲಿಯೇ ಮೊದಲ ಬಾರಿ ಮಂಜನಾಡಿ ಪಂಚಾಯಿತಿಗೆ ಉಳಿದ ಪಂಚಾಯಿತಿಗಳಿಗಿಂತ ಹೆಚ್ಚುವರಿ ಅನುದಾನ ಮಂಜೂರಾಗಿದ್ದು ಮಂಜನಾಡಿ ಗ್ರಾಮದಲ್ಲಿ ಇನ್ನೂ ಅಣೇಕ ಅಭಿವೃದ್ಧಿ ಕೆಲಸಗಳು ನಡೆಯಲಿದೆ ಎಂದು ರಾಜ್ಯ ಅರೋಗ್ಯ ಸಚಿವ ಯು.ಟಿ ಖಾದರ್ ಹೇಳಿದರು.
ಅವರು ಭಾನುವಾರ ಮಂಜನಾಡಿ ಕಲ್ಕಟ್ಟದಲ್ಲಿ ಕಟ್ಟೆಮಾರ್ ನಾಗರಿಕ ಸಮಿತಿ ಅಯೋಜಿಸಿದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮತನಾಡಿದರು.

ರಾಜ್ಯದ ಎಲ್ಲಾ ಪಂಚಾಯಿತಿಗೆ ರೂ. 75 ಲಕ್ಷ ಅನುದಾನ ಮಂಜೂರಾಗಿದೆ. ಆದರೆ ಮಂಜನಾಡಿ ಪಂಚಾಯಿತಿಗೆ ರೂ. 1.5 ಕೋಟಿ ಅನುದಾನವನ್ನು ಮಂಜೂರುಗೊಳಿಸಲಾಗಿದೆ. ಕಟ್ಟೆಮಾರ್ ಹಿರಿಯ ನಾಗರಿಕ ಪಕೀರ್ ಸಾಹೇಬ್ ಕಾರ್ಯಕ್ರಮ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಜಿ.ಪಂ ಸದಸ್ಯ ರಶೀದಾ ಬಾನು ಹರೇಕಳ ಮಾತನಾಡಿ ಈ ಸನ್ಮಾನ ಸ್ವೀಕರಿಸುದರೊಂದಿಗೆ ನನ್ನ ಜವಾಬ್ದಾರಿ ಹೇಚ್ಚಿಸುವ ಸಂಕೇತವಾಗಿದೆ. ನಾನು ನನ್ನ ಕ್ಷೇತ್ರದಲ್ಲಿ ಸಚಿವ ಯು.ಟಿ ಖಾದರ್‌ರವರ ಸಹಕಾರದಿಂದ ಅಭಿವೃದ್ದಿಗೊಳಿಸಲು ಪ್ರಯತ್ನ ಮಾಡುವೆನು ಎಂದರು.
ಈ ಸಂದರ್ಭ ಜಿ.ಪಂ ಸದಸ್ಯ ರಶೀದಾ ಬಾನು ಹರೇಕಳ ಮತ್ತು ತಾ.ಪಂ ಸದಸ್ಯೆ ಸುರೇಖಾ ಚಂದ್ರಹಾಸ್ ಸನ್ಮಾನಿಸಲಾಯಿತು.

 ಮಂಜನಾಡಿ ಗ್ರಾ.ಪಂ ಅಧ್ಯಕ್ಷ ಮುಹಮ್ಮದ್ ಅಸೈ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಾಜಿ ಜಿ.ಪಂ ಸದಸ್ಯ ಎ.ಎಸ್ ಕರೀಂ, ಮಾಜಿ ತಾ.ಪಂ ಸದಸ್ಯ ಮುಸ್ತಫ ಹರೇಕಳ, ಮಂಜನಾಡಿ ಗ್ರಾ.ಪಂ ಸದಸ್ಯರಾದ ಎ.ಎಂ ಕುಂಞಬಾವ ಹಾಜಿ, ಮೊದಿನ್ ಕುಂಞ, ಇಲ್ಯಾಸ್ ಅನ್ಸಾರ್‌ನಗರ, ಅಬ್ದುಲ್ ಖಾದರ್ ಕಲ್ಕಟ್ಟ, ಅಬ್ಬಾಸ್ ಮದ್ಪಾಡಿ, ಕಟ್ಟೆಮಾರ್ ನಾಗರಿಕ ಸಮಿತಿಯ ಅಧ್ಯಕ್ಷ ಮೋನು ಕೆ.ಎಂ, ಉಪಾಧ್ಯಕ್ಷರಾದ ಮೊದ್ದೀನ್ ಕುಂಞ ಬಾವು, ಮುತ್ತಲಿಬ್ ಬಳಗುಡ್ಡೆ, ಜೋತೆಕಾರ್ಯದರ್ಶಿಗಳಾದ ಕೆ.ಎಂ ಹಸನ್(ಕುಂಞ ಕಟ್ಟೆ), ಶ್ರೀನಿವಾಸ್ ಆಳ್ವ, ಕೋಶಾಧಿಕಾರಿ ಹರೀಶ್.ಕೆ, ಸದಸ್ಯರಾದ ಝಾಕರಿಯ ಕಟ್ಟೆಮಾರ್, ಗಂಗಧರ್ ಆಳ್ವ ಕಟ್ಟೆಮಾರ್, ಅನಂದ್.ಕೆ, ಮೋಹನ್ ಅಶ್ರಫ್ ಕಟ್ಟೆ ಮುಂತಾದವರು ಈ ಸಂದರ್ಭ ಉಪಸ್ಥಿತರಿದರು. ಕಾರ್ಯದರ್ಶಿ ಪೆಲಿಕ್ಸ್ ಡಿ’ಸೋಜ ಸ್ವಾಗತಿಸಿ, ಪಿಲೀಫ್ ಡಿ’ಸೋಜ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News