ಸುಳ್ಯ : ಲಾರಿಗೆ ಬೈಕ್ ಢಿಕ್ಕಿ : ಸವಾರ ಸ್ಥಳದಲ್ಲೇ ಮತ್ಯು
Update: 2016-03-28 20:20 IST
ಸುಳ್ಯ: ಗೂಡ್ಸ್ ಲಾರಿಗೆ ಬೈಕ್ ಢಿಕ್ಕಿ ಹೊಡೆದು ಸವಾರ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಸುಳ್ಯ ಸಮೀಪದ ಪರಿವಾರಕಾನ ಎಂಬಲ್ಲಿ ಸಂಭವಿಸಿದೆ.
ಪೆರಾಜೆ ಗ್ರಾಮದ ಗರುಗುಂಜ ನಿವಾಸಿ ಗಿರೀಶ್ (30) ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ಯುವಕ. ಗಿರೀಶ್ ತನ್ನ ಬೈಕ್‌ನಲ್ಲಿ ಸುಳ್ಯದಿಂದ ಮನೆಗೆ ಹೋಗುತ್ತಿದ್ದಾಗ ಸಂಪಾಜೆ ಕಡೆಯಿಂದ ಸುಳ್ಯದತ್ತ ಬರುತ್ತಿದ್ದ ಪೊನ್ನಂಪೇಟೆಯ ಗೂಡ್ಸ್ ಲಾರಿಯ ಮಧ್ಯ ಭಾಗಕ್ಕೆ ಢಿಕ್ಕಿ ಹೊಡೆಯಿತು. ನೆಲಕ್ಕೆ ಬಿದ್ದ ಗಿರೀಶರವರಿಗೆ ತೀವ್ರ ಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟರು. ಸುಳ್ಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.