ಉಳ್ಳಾಲ : ಸರಕಾರಿ ಅಧಿಕಾರಿಗಳಿಂದ ಸ್ವಚ್ಛತ ಅಭಿಯಾನ
Update: 2016-03-28 20:22 IST
ಉಳ್ಳಾಲ: ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ ಉಳ್ಳಾಲ ನಗರಸಭೆ ಮತ್ತು ಉಳ್ಳಾಲ ಪೊಲೀಸ್ ಠಾಣೆ ಜಂಟಿ ಆಶ್ರಯದಲ್ಲಿ ಸೋಮವಾರ ಉಳ್ಳಾಲದಾದ್ಯಂತ ಸರಕಾರಿ ಕಟ್ಟಡಗಳ ಶೌಚಾಲಯ ಸಹಿತ ಕಟ್ಟಡದ ಸುತ್ತಲಿನ ವಾತಾವರಣವನ್ನು ಶುಚಿಗೊಳಿಸಿ ಸ್ವಚ್ಛತಾ ಅಭಿಯಾನ ಉಳ್ಳಾಲ ನಗರಸಭೆ ಅಧ್ಯಕ್ಷ ಹುಸೈನ್ ಕುಂಞಿಮೋನು ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಚಿತ್ರಾ ಚಂದ್ರಕಾಂತ್, ಉಳ್ಳಾಲ ನಗರಸಭೆ ಪೌರಾಯುಕ್ತೆ ರೂಪಾ.ಟಿ.ಶೆಟ್ಟಿ, ಎಸಿಪಿ ಕಲ್ಯಾಣಿ ಶೆಟ್ಟಿ, ಉಳ್ಳಾಲ ಎಸ್.ಐ ಭಾರತಿ, ನಗರಸಭೆ ಸದಸ್ಯೆ ಮುಸ್ತಾಫ, ಹಿರಿಯ ಆರೋಗ್ಯ ನಿರೀಕ್ಷಕ ಜಯಶಂಕರ್, ಕಿರಿಯ ಆರೋಗ್ಯ ನಿರೀಕ್ಷಕ ರಾಜೇಶ್, ಆರೋಗ್ಯ ನಿರೀಕ್ಷಕ ಸಾಜಿತ್, ಪೌರ ಕಾರ್ಮಿಕ ಶಿವಪ್ಪ ಅಂಗಾರ ಅಭಿಯಾನದಲ್ಲಿ ಭಾಗವಹಿಸಿದರು.