ಮೂಡುಬಿದಿರೆ : ಶ್ರೀ ಆದಿಶಕ್ತಿ ಮಹಾದೇವಿಗೆ ಬ್ರಹ್ಮಕಲಶ: ಹೊರೆಕಾಣಿಕೆ
Update: 2016-03-28 20:57 IST
ಮೂಡುಬಿದಿರೆ: ನವೀಕೃತ, ಶಿಲಾಮಯ ಪುರಾತನ ಶ್ರೀ ಆದಿಶಕ್ತಿ ಮಹಾದೇವಿ ದೇವಸ್ಥಾನದಲ್ಲಿ ಬಿಂಬ ಪ್ರತಿಷ್ಠೆ (ಮಾ.30) ಮತ್ತು ಬ್ರಹ್ಮಕಲಶೋತ್ಸವ (ಮಾ. 31)ದಂಗವಾಗಿ ಸೋಮವಾರ ಸಂಜೆ ಶ್ರೀ ವೆಂಕಟರಮಣ ಮತ್ತು ಶ್ರೀ ಹನುಮಂತ ದೇವಸ್ಥಾನಗಳ ಬಳಿಯಿಂದ ಹಸಿರುವಾಣಿ ಹೊರೆ ಕಾಣಿಕೆ ಮೆರವಣಿಗೆ ಜರಗಿತು. ಮೂಡುಬಿದಿರೆ ಪೇಟೆ ಮತ್ತು ದೇವಳ ವ್ಯಾಪ್ತಿಯ 18ಮಾಗಣೆಗಳ ಭಕ್ತಾದಿಗಳು, ಮಾರಿಗುಡಿಯ ಆಡಳಿತ ಮತ್ತು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶೀಧರ ಬೋವಿ, ಪ್ರ. ಕಾರ್ಯದರ್ಶಿ ಉಮೇಶ ಬೋವಿ, ಕಾರ್ಯದರ್ಶಿ ಲಕ್ಷ್ಮಣ ಬೋವಿ, ಕೋಶಾಕಾರಿ ಸುಂದರ ಬೋವಿ ಹಾಗೂ ಪದಾಕಾರಿಗಳು ಪಾಲ್ಗೊಂಡಿದ್ದರು.