ನಾಪತ್ತೆಯಾಗಿದ್ದ ಭಾರತೀಯ ಮೃತ್ಯು
Update: 2016-03-28 23:29 IST
ಬ್ರಸೆಲ್ಸ್, ಮಾ.28: ಬ್ರಸೆಲ್ಸ್‌ನಲ್ಲಿ ಬಾಂಬ್ ದಾಳಿ ಯಾದಂದಿನಿಂದ ನಾಪತ್ತೆಯಾಗಿದ್ದ ಬೆಂಗಳೂರಿನ ಇನ್‌ಫೋಸಿಸ್ ಉದ್ಯೋಗಿ ರಾಘವೇಂದ್ರ ಗಣೇಶ್ ಮೃತಪಟ್ಟಿರುವುದು ಸೋಮವಾರ ದೃಢಪಟ್ಟಿದೆ.
ದಾಳಿ ನಡೆದ ಒಂದು ವಾರದ ಬಳಿಕ ಅವರ ಸಾವನ್ನು ಬ್ರಸೆಲ್ಸ್ ನಲ್ಲಿನ ಭಾರತೀಯ ರಾಯಭಾರ ಕಚೇರಿ ಮತ್ತು ಹೊಸದಿಲ್ಲಿಯಲ್ಲಿನ ವಿದೇಶ ವ್ಯವಹಾರಗಳ ಸಚಿವಾಲಯ ಖಚಿತಪಡಿಸಿವೆ.
‘‘ಮಾರ್ಚ್ 22ರಂದು ನಡೆದ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟವರ ಪೈಕಿ ರಾಘವೇಂದ್ರ ಗಣೇಶ್ ಸೇರಿದ್ದಾರೆ ಎನ್ನುವುದನ್ನು ಬೆಲ್ಜಿಯಂನ ಅಧಿಕಾರಿಗಳು ಖಚಿತಪಡಿಸಿದ್ದಾರೆ’’ ಎಂದು ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್ ಹೇಳಿದ್ದಾರೆ.