ವಿದೇಶಿ ಸಿಗರೇಟ್ ವಶ: ಓರ್ವನ ಬಂಧನ
Update: 2016-03-28 23:47 IST
ಕಾಸರಗೋಡು, ಮಾ.28: ಕಾಸರಗೋಡು ನಗರ ಮತ್ತು ಆಸು ಪಾಸಿನಲ್ಲಿ ನಡೆಸಿದ ದಾಳಿಯಿಂದ ಭಾರೀ ಪ್ರಮಾಣದ ವಿದೇಶಿ ಸಿಗರೇಟ್‌ನ್ನು ವಶಪಡಿಸಿಕೊಂಡಿದ್ದು, ಓರ್ವನನ್ನು ಬಂಧಿಸಲಾಗಿದೆ.
ಬಂಧಿತನನ್ನು ಚೆಮ್ನಾಡಿನ ಝಹೀರ್ ಅಬ್ಬಾಸ್ (35) ಎಂದು ಗುರುತಿಸಲಾಗಿದೆ.ೆಮ್ನಾಡ್ ಶಾಲೆ ಬಳಿ ಅಂಗಡಿಯನ್ನು ನಡೆಸುತ್ತಿರುವ ಈತ ಪ್ಯಾಕೆಟ್‌ಗಳಲ್ಲಿ ಮುನ್ನೆಚ್ಚರಿಕೆ ಮುದ್ರಿಸದ ವಿದೇಶಿ ಸಿಗರೇಟನ್ನು ಮಾರಾಟ ಮಾಡುತ್ತಿದ್ದನು ಎನ್ನಲಾಗಿದೆ. ನಿಷೇಧಿತ ಸಿಗರೇಟ್ ಮತ್ತು ಮಾದಕ, ತಂಬಾಕು ವಸ್ತುಗಳ ಪತ್ತೆಗೆ ಪೊಲೀಸ್, ಆರೋಗ್ಯ ಇಲಾಖೆ ಮತ್ತು ಕಂದಾಯ ಇಲಾಖಾಧಿಕಾರಿಗಳು ತೀವ್ರ ತಪಾಸಣೆ ನಡೆಸುತ್ತಿದ್ದಾರೆ.