×
Ad

ನಾಪತ್ತೆ ಪ್ರಕರಣಕ್ಕೆ ತಿರುವು: ವಿವಾಹಿತನ ಬಂಧನ

Update: 2016-03-28 23:50 IST

ಸುಬ್ರಹ್ಮಣ್ಯ, ಮಾ.28: ಇಲ್ಲಿಗೆ ಸಮೀಪದ ಯೇನೆಕಲ್ಲುವಿನ ಸಂಧ್ಯಾ(23) ಎಂಬಾಕೆಯ ಜತೆ ಮಾ.20ರಂದು ನಾಪತ್ತೆಯಾಗಿ ಬಳಿಕ ಮಾ.26ರಂದು ಸುಬ್ರಹ್ಮಣ್ಯ ಠಾಣೆಗೆ ಹಾಜರಾದ ಜೇನುಕೋಡಿ ನಿವಾಸಿ ಮೋಹಿತ್ (37)ನನ್ನು ಪೊಲೀಸರು ಬಂಧಿಸಿದ್ದಾರೆ.

ಯುವತಿ ಸಂಧ್ಯಾ ರವಿವಾರ ಸುಬ್ರಹ್ಮಣ್ಯ ಠಾಣೆಯಲ್ಲಿ ಆರೋಪಿಯ ವಿರುದ್ಧ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡರು.
ಯೇನೆಕಲ್ಲು ಗ್ರಾಮದ ಜೇನುಕೋಡಿ ನಿವಾಸಿ ಅಂತಾರಾಷ್ಟ್ರೀಯ ವಾಲಿಬಾಲ್ ತೀರ್ಪುಗಾರ ಮೋಹಿತ್‌ಗೆ ಪಕ್ಕದ ಮನೆಯ ಪರ್ಲ ಬಾಲಕೃಷ್ಣ ಎಂಬವರ ಮನೆಯಲ್ಲಿ ಕೆಲಸಕ್ಕಿದ್ದ ಸಂಬಂಧಿ ಯುವತಿ ಸಂಧ್ಯಾ ಜತೆ ಸ್ನೇಹವಿತ್ತು. ಅವರಿಬ್ಬರು ಮಾ.20 ರಂದು ಮನೆ ಬಿಟ್ಟು ತೆರಳಿದ್ದರು. ಘಟನೆಗೆ ಸಂಬಂಧಿಸಿ ಯುವತಿಯ ಸಂಬಂಧಿಕರು ಸುಬ್ರಹ್ಮಣ್ಯ ಠಾಣೆಯಲ್ಲಿ ಯುವತಿ ನಾಪತ್ತೆಯಾಗಿರುವ ಬಗ್ಗೆ ಲಿಖಿತ ದೂರು ದಾಖಲಿಸಿದ್ದರೆ, ಯುವಕನ ಕಡೆಯವರು ಮೌಖಿಕ ದೂರು ನೀಡಿದ್ದರು.
 
ನಾಪತ್ತೆಯಾಗಿದ್ದ ಮೋಹಿತ್ ಶನಿವಾರ ಸುಬ್ರಹ್ಮಣ್ಯ ಠಾಣೆಗೆ ಯುವತಿ ಸಂಧ್ಯಾ ಜತೆ ಆಗಮಿಸಿ ಪೊಲೀಸರಿಗೆ ಶರಣಾಗಿದ್ದರು. ಅವರಿಬ್ಬರನ್ನು ಸಂಬಂಧಿಕರ ಉಪಸ್ಥಿತಿಯಲ್ಲಿ ವಿಚಾರಣೆಗೆ ಒಳಪಡಿಸಲಾಗಿತ್ತು. ಲ್ಟಾ ಹೊಡೆದ ಯುವತಿ: ಯುವತಿ ಸಂಧ್ಯಾ ರವಿವಾರ ಮೋಹಿತ್ ವಿರುದ್ಧ ದೂರು ನೀಡಿ ತನ್ನನ್ನು ಸುಳ್ಳು ಹೇಳಿ ಕರೆದೊಯ್ದು ಬಲತ್ಕಾರವಾಗಿ ಅತ್ಯಾಚಾರ ನಡೆಸಿದ್ದಾಗಿ ತಿಳಿಸಿದ್ದರು. ಅದರಂತೆ ಕೇಸು ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ರವಿವಾರ ರಾತ್ರಿ ಸುಳ್ಯ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News