ಸೇವಂತಿಗುಡ್ಡೆ: ಒಣಹುಲ್ಲಿಗೆ ಬೆಂಕಿ, ತಪ್ಪಿದ ಅನಾಹುತ
Update: 2016-03-28 23:51 IST
ಉಳ್ಳಾಲ, ಮಾ.28: ತೊಕ್ಕೊಟ್ಟು ಸಮೀಪದ ಚೆಂಬುಗುಡ್ಡೆಯ ಸೇವಂತಿಗುಡ್ಡೆ ಪ್ರದೇಶದಲ್ಲಿ ಒಣಹುಲ್ಲಿಗೆ ಆಕಸ್ಮಿಕವಾಗಿ ಬೆಂಕಿ ತಗಲಿದ್ದು, ಅಗ್ನಿ ಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸುವ ಮೂಲಕ ದುರಂತವನ್ನು ತಪ್ಪಿಸಿದ್ದಾರೆ. ಗುಡ್ಡ ಪ್ರದೇಶದ ಸಮೀಪ ಮೆಸ್ಕಾಂ ಕಚೇರಿ ಹಾಗೂ ಯುನಿಟ್ ಇದ್ದು, ಹಲವು ಮನೆಗಳು ಕೂಡಾ ಇದ್ದು, ಅಗ್ನಿ ಶಾಮಕ ದಳದ ಕ್ಷಿಪ್ರ ಕಾರ್ಯಾಚರಣೆಯಿಂದ ಸಂಭಾವ್ಯ ಅಪಾಯ ತಪ್ಪಿತು. ಪ್ರತಿವರ್ಷವೂ ಬೇಸಿಗೆಯಲ್ಲಿ ಈ ಪ್ರದೇಶದಲ್ಲಿ ಬೆಂಕಿ ಆಕಸ್ಮಿಕ ಉಂಟಾಗುತ್ತಿದ್ದು, ಸಮೀಪದಲ್ಲಿ ಕಸದ ರಾಶಿಗೆ ಬೆಂಕಿ ಹಚ್ಚುವುದರಿಂದ ಇಂತಹ ಅನಾಹುತಗಳು ಸಂಭವಿಸುತ್ತಿವೆ ಎನ್ನುವುದು ಸ್ಥಳೀಯರ ಆರೋಪವಾಗಿದೆ.