ಕಾರ್ಕಳ: ಜೀವನ ಕೌಶಲ್ಯ ತರಬೇತಿ ಶಿಬಿರ
Update: 2016-03-28 23:55 IST
ಕಾರ್ಕಳ, ಮಾ.28: ನೆಹರು ಯುವ ಕೇಂದ್ರ ಉಡುಪಿ, ರಾಷ್ಟ್ರೀಯ ಯೋಜನೆ ಘಟಕ, ಬಜಗೋಳಿ ಸ.ಪ.ಪೂ.ಕಾಲೇಜು ಹಾಗೂ ತಾಲೂಕು ಯುವಜನ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ಬಜಗೋಳಿ ಸ.ಪ.ಪೂ.ಕಾಲೇಜಿನಲ್ಲಿ ‘ಜೀವನ ಕೌಶಲ್ಯ ತರಬೇತಿ ಶಿಬಿರ’ವನ್ನು ಬಜಗೋಳಿ ಜಿಪಂ ಸದಸ್ಯ ಉದಯ ಎಸ್.ಕೋಟ್ಯಾನ್ ಉದ್ಘಾಟಿಸಿದರು.
ಮುಡಾರು ಗ್ರಾಪಂ ಅಧ್ಯಕ್ಷೆ ಗೀತಾ ಪಾಟ್ಕರ್ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಗಣೇಶ ಬರ್ಲಾಯ, ಮುಡಾರು ತಾಪಂ ಸದಸ್ಯ ಸುಧಾಕರ ಶೆಟ್ಟಿ, ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಮಹಾವೀರ ಜೈನ್, ಸಂಪನ್ಮೂಲ ವ್ಯಕ್ತಿ ಆಲ್ವಿನ್ ದಾಂತಿ ಉಪಸ್ಥಿತರಿದ್ದರು. ಉಪನ್ಯಾಸಕ ವಿ.ಪಿ.ವೀರೇಂದ್ರ ಸ್ವಾಗತಿಸಿದರು. ಕೀರ್ತನಾ ಕಾರ್ಯಕ್ರಮ ನಿರೂಪಿಸಿದರು. ನೆಹರು ಯುವ ಕೇಂದ್ರದ ಸಹಾಯಕ ಸಮನ್ವಯಾಧಿಕಾರಿ ವಿಷ್ಣುಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರವೀಣ್ ಕುಮಾರ್ ಶೆಟ್ಟಿ ವಂದಿಸಿದರು.