ಹಿರಿಯಡಕ ಕಾಲೇಜಿನಲ್ಲಿ ಕಿರು ಉದ್ಯೋಗ ಮೇಳ

Update: 2016-03-28 18:26 GMT

ಉಡುಪಿ, ಮಾ.28: ಹಿರಿಯಡಕ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ವ್ಯಾಸಂಗ ಪೂರೈಸಿದ ವಿದ್ಯಾರ್ಥಿ ಗಳಿಗಾಗಿ ಮಣಿಪಾಲದ ಎಚ್‌ಡಿಎಫ್‌ಸಿ ಬ್ಯಾಂಕ್‌ನ ವತಿಯಿಂದ ಇತ್ತೀಚೆಗೆ ಕಿರು ಉದ್ಯೋಗ ಮೇಳ ನಡೆಯಿತು. ಬ್ಯಾಂಕಿನ ಮಣಿಪಾಲ, ಕಾರ್ಕಳ ಹಾಗೂ ಮೂಡುಬಿದಿರೆ ಶಾಖೆ ಗಳಲ್ಲಿ ಖಾಲಿ ಇರುವ ಫೀಲ್ಡ್ ಆಫೀಸರ್ಸ್‌ ಹುದ್ದೆಗಳಿಗಾಗಿ ಅಭ್ಯ ರ್ಥಿಗಳಿಗೆ ಸಂದರ್ಶನವನ್ನು ಏರ್ಪಡಿಸಲಾಗಿತ್ತು. ಮಣಿಪಾಲ ಶಾಖೆಯ ಪ್ರಬಂಧಕ ಬಸವರಾಜ್ ಬಿ. ಸಂದರ್ಶನ ನಡೆಸುವ ಮುನ್ನ ಓರಿಯಂಟೇಶನ್ (ಅಭಿವಿನ್ಯಾಸ) ಕಾರ್ಯಕ್ರಮ ನಡೆಸಿಕೊಟ್ಟರು.

ಕಾಲೇಜಿನ ಪ್ರಾಂಶುಪಾಲ ಸೋಜನ್ ಕೆ.ಜಿ. ಕಾಲೇಜಿನಲ್ಲಿ ಪ್ರಪ್ರಥಮ ಬಾರಿಗೆ ಕ್ಯಾಂಪಸ್ ಸೆಲೆಕ್ಷನ್ ನಡೆಯುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News