×
Ad

ಕಾಂಗ್ರೆಸ್‌ನ ಬಾಯಿ ಮುಚ್ಚಿಸಲು ಸಾವರ್‌ಕರ್‌ಗೆ ಭಾರತ ರತ್ನ ನೀಡಿ: ಉದ್ಧವ್ ಠಾಕ್ರೆ ಪ್ರತಿಪಾದನೆ!

Update: 2016-03-29 11:32 IST

ಮುಂಬೈ, ಮಾ. 29: ಶಿವಸೇನೆ ಅಧ್ಯಕ್ಷ ಉದ್ಧವ್ ಠಾಕ್ರೆ ಶಾಸ್ವತವಾಗಿ ಕಾಂಗ್ರೆಸ್ ಬಾಯಿ ಮುಚ್ಚಲಿಸಿಕ್ಕಾಗಿ ವೀರ ಸಾವರ್‌ಕರ್‌ರಿಗೆ  ಭಾರತ ರತ್ನ ನೀಡಬೇಕೆಂಬ ಬೇಡಿಕೆಯನ್ನು ಮುಂದಿಟ್ಟಿದ್ದಾರೆ.

ಉದ್ಧವ್‌ ಮುಂಬೈಯಲ್ಲಿ ಹೇಳಿಕೆ ನೀಡಿ ಬಿಜೆಪಿ ನೇತೃತ್ವದ ಸರಕಾರ ಸಾವರ್‌ಕರ್‌ರಿಗೆ ಸರ್ವೋಚ್ಚ ನಾಗರಿಕ ಸಮ್ಮಾನ ನೀಡಬೇಕೆಂದು ಆಗ್ರಹಿಸಿದ್ದಾರೆ. ಮಹಾರಾಷ್ಟ್ರದಲ್ಲಿ ವೀರ ಸಾವರ್‌ಕರ್‌ರನ್ನು ಬಹಳವಾಗಿ ಗೌರವಿಸುತ್ತಿರುವ ದೃಶ್ಯ ಕಾಣಸಿಗುತ್ತದೆ. ಶಿವಸೇನೆಯ ಇನ್ನೊಬ್ಬ ನಾಯಕ ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಈ ವಿಷಯವನ್ನು ಎತ್ತಲಾಗುವುದೆಂದು ಹೇಳಿರುವುದಾಗಿ ವರದಿಯಾಗಿದೆ.

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಈ ತಿಂಗಳಲ್ಲಿ ಲೋಕಸಭೆಯಲ್ಲಿ ಚರ್ಚೆಯೊಂದರಲ್ಲಿ ಭಾಗವಹಿಸುತ್ತಾ ಬಿಜೆಪಿ ಸಾವರ್‌ಕರ್‌ರ ಆದರ್ಶದಲ್ಲಿ ಚಲಿಸುತ್ತಿದೆ. ಕಾಂಗ್ರೆಸ್ ಮಹಾತ್ಮಗಾಂಧಿ ತೋರಿಸಿಕೊಟ್ಟ ದಾರಿಯಲ್ಲಿ ನಡೆಯುತ್ತಿದೆ ಎಂದು ಹೇಳಿದ್ದರು. ವಿಪಕ್ಷವು ಕಳೆದ ವಾರ ಮತ್ತೊಮ್ಮೆ ಇದೇ ವಿಷಯವನ್ನು ಪ್ರಸ್ತಾಪಿಸಿದ್ದು ಆಗ ರಾಹುಲ್ ಭಗತ್ ಸಿಂಗ್ ಬ್ರಿಟಿಶ್ ರಾಜ್ ವಿರುದ್ಧ ಆಝಾದಿಗಾಗಿ ಸಂಘರ್ಷ ಮಾಡಿದ್ದರೆ, ಸಾವರ್‌ಕರ್ ಬ್ರಿಟಿಶ್ ರಾಜ್ಯದಲ್ಲಿ ಗುಲಾಮರಾಗಿರಲು ದಯೆಯ ಭಿಕ್ಷೆಯನ್ನು ಬೇಡಿದ್ದರೆಂದು ಟ್ವೀಟ್ ಮಾಡಿ ತಿಳಿಸಿದ್ದರು.

ಬಿಜೆಪಿ, ಕಾಂಗ್ರೆಸ್ ಮಾಫಿ ಕೇಳಬೇಕು ಇಲ್ಲದಿದ್ದರೆ ವಿರೋಧಿಸಿ ಪ್ರತಿಭನೆ ನಡೆಸಲಾಗುವುದು ಎಂದು ಎಚ್ಚರಿಸಿತ್ತು. ಈ ವಿಷಯದಲ್ಲಿ ಸೇರಿಕೊಂಡ ಉದ್ಧವ್ ಠಾಕ್ರೆ ಒಂದು ವೇಳೆ ಕೇಂದ್ರ ಸರಕಾರ ಬಲಪಂಥೀಯ ವಿಚಾರ ಪ್ರತಿಪಾದಕರಿಗೆ ಭಾರತ ರತ್ನ ನೀಡುವುದಾದರೆ ವಿರೋಧಿಸಿ ಪ್ರತಿಭಟನೆ ನಡೆಸುವ ಅಗತ್ಯವಿರಲಾರದು ಎಂದು ಹೇಳಿರುವುದಾಗಿ ವರದಿಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News