ಹೀಗೂ ಉಂಟೇ?
Update: 2016-03-29 12:58 IST
ಭೋಪಾಲ್ : ಚಲಿಸುವ ರೈಲೊಂದರಲ್ಲಿ ಪ್ರಯಾಣಿಕರ ನಡುವೆ ಕುಡಿಯುವ ನೀರಿನ ವಿಚಾರವಾಗಿ ನಡೆದ ಜಗಳದ ಪರಿಣಾಮವಾಗಿವ್ಯಕ್ತಿಯೊಬ್ಬನನ್ನು ಮೂರು ಮಂದಿ ರೈಲಿನ ಕಿಟಿಕಿಗೆ ಕಟ್ಟಿ ಹಾಕಿ ಹಲ್ಲೆ ನಡೆಸಿದ ಘಟನೆ ಮಧ್ಯ ಪ್ರದೇಶದ ಇಟರ್ಸಿಜಿಲ್ಲೆಯಿಂದ ವರದಿಯಾಗಿದೆ. ಗಾಯಾಳುವನ್ನು ಸುಮಿತ್ ಎಂದು ಗುರುತಿಸಲಾಗಿದೆ.
ಸುಮಿತ್ ತಂದೆ ರಘುನಾಥ್ ಕಚಿ ಆರೋಪಿಗಳಿಗೆ ಸೇರಿದ ನೀರಿನ ಬಾಟಲಿಯಿಂದ ನೀರು ಕುಡಿದಿದ್ದೇ ದೊಡ್ಡ ತಪ್ಪೆನ್ನುವಂತೆ ಮೂವರೂ ಆತನಿಗೆ ಚೆನ್ನಾಗಿ ಥಳಿಸಿದ್ದರು.ಈ ಘಟನೆಯ ವೀಡಿಯೋ ಕೂಡ ವೈರಲ್ ಆಗಿದ್ದುಸುಮಿತ್ತನ್ನ ಒಳಉಡುಪಿನಲ್ಲಿ ರೈಲಿನ ಕಿಟಿಕಿಯಿಂದ ನೇತಾಡುತ್ತಿರುವುದು ಹಾಗೂ ಮೂವರೂ ಆತನಿಗೆ ಬೆಲ್ಟೊಂದರಿಂದ ಹೊಡೆಯುತ್ತಿರುವುದನ್ನು ಈ ವೀಡಿಯೋದಲ್ಲಿ ನೋಡಬಹುದಾಗಿದೆ.
ಪೊಲೀಸರು ಮೂವರು ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದು ಇಲ್ಲಿಯ ತನಕ ಯಾರನ್ನೂ ಬಂಧಿಸಲಾಗಿಲ್ಲ.