ಚರಿತ್ರೆಯನ್ನು ತಿರುಚಿ ಸಮುದಾಯವನ್ನು ವಿಭಜಿಸಿ, ಲಾಭವನ್ನು ಪಡೆಯಲು ಆರ್‌ಎಸ್‌ಎಸ್ ಪ್ರಯತ್ನಿಸುತ್ತಿದೆ: ಅಪ್ಸಲ್ ಖಾಸಿಮಿ
ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ದೇಶದಾದ್ಯಂತ ಹಮ್ಮಿಕೊಂಡಂತಹ ಏಕತಾ ಅಭಿಯಾನದ ಪ್ರಯುಕ್ತ ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ಪುಂಜಾಲಕಟ್ಟೆ ಇದರ ವತಿಯಿಂದ ದಿನಾಂಕ 28-03-2016 ರಂದು ಏಕತೆಯೇ ಭದ್ರತೆ ಎಂಬ ವಿಷಯದ ಕುರಿತು ಕಾರ್ಯಕ್ರಮವನ್ನು ನಡೆಸಲಾಯಿತು
ಕಾರ್ಯಕ್ರಮವನ್ನು ದುವಾ ಮೂಲಕ ಉದ್ಘಾಟಿಸಿ ಮಾತನಾಡಿದ ಬಹು ಸಯ್ಯದ್ ಇಬ್ರಾಹೀಂ ಅಲ್ ಹಾದಿ ತಂಙಲ್, ಅಂಗರಗುಡ್ಡೆ ಇಮಾಮರ ಮೂಲಕ ಮಾತ್ರವೇ ಸಮುದಾಯದ ಏಕತೆ ಮತ್ತು ಸಬಲೀಕರಣ ಸಾಧ್ಯ ಎಂದು ನುಡಿದರು. ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಮಾತುಗಳನ್ನಾಡಿದ ಬಹು ಶಾಫಿ ಬೆಳ್ಳಾರೆ, ಕಾರ್ಯದರ್ಶಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ, ಕರ್ನಾಟಕ ರಾಜ್ಯ, ದೇಶದಲ್ಲಿ ಮುಸ್ಲಮಾನರನ್ನು ವಿಭಜಿಸಲು, ಮುಸಲ್ಮಾನರ ಮಧ್ಯೆಯೇ ಪ್ರವೇಶ ಮಾಡಿ ಆ ಮೂಲಕ ಲಾಭ ಪಡೆಯಲು ಆರ್ ಎಸ್ ಎಸ್ ಸಂಚು ರೂಪಿಸುತ್ತಿದೆ, ಆದರೆ ಆರ್ ಎಸ್ ಎಸ್‌ನ ಷಡ್ಯಂತರವನ್ನ ಜನರಿಗೆ ತಲುಪಿಸಲೆಂದೇ ಏಕತಾ ಅಭಿಯಾನ ಎಂಬ ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿದೆ ಎಂದರು.
ಮುಖ್ಯ ಪ್ರಭಾಷಣಗಾರರಾಗಿ ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ಕೇರಳ ರಾಜ್ಯ ಉಪಾಧ್ಯಕ್ಷರಾದ ಅಪ್ಸಲ್ ಖಾಸಿಮಿ ಕೊಲ್ಲಮ್, ಮಾತನಾಡಿ, ಜನರು ಇಸ್ಲಾಮಿನ ಚರಿತ್ರೆಯನ್ನು ಅರಿಯಬೇಕು, ಕಾರಣ ಚರಿತ್ರೆಯನ್ನು ತಿರುಚಿ ಮುಸಲ್ಮಾನ ಸಮುದಾಯವನ್ನು ಪಾರ್ಟಿ ಪಂಗಡಗಳಿಂದ ವಿಭಜಿಸಿ ಅವರ ಮಧ್ಯೆ ಗಲಭೆ ಸೃಷ್ಟಿಸಿ ಅದರ ಲಾಭವನ್ನು ಪಡೆಯಲು ಆರ್‌ಎಸ್‌ಎಸ್ ಪ್ರಯತ್ನಿಸುತ್ತಿದೆ ಎಂದರು ಸಮುದಾಯದ ಏಳಿಗೆಗಾಗಿ ಮುಸಲ್ಮಾನರು ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್‌ನೊಂದಿಗೆ ಕೈ ಜೋಡಿಸಬೇಕು ಬಹು ಜಾಫರ್ ಸಾದಿಕ್ ಫೈಝಿ ಕಾರ್ಯದರ್ಶಿ ಆಲ್ ಇಂಡಿಯಾ ಇಮಾಮ್ಸ್
ಕೌನ್ಸಿಲ್ ಕರ್ನಾಟಕ ಅಧ್ಯಕ್ಷೀಯ ಭಾಷಣಗೈದರು. ಅಬ್ದುಲ್ ರವೂಫ್ ಪುಂಜಾಲಕಟ್ಟೆ ಕಾರ್ಯಕ್ರಮವನ್ನು ಸ್ವಾಗತಿಸಿದರು, ಅಬ್ದುಲ್ ಖಾದರ್ ನಾವೂರು ಕಾರ್ಯಕ್ರಮವನ್ನು ವಂದಿಸಿ ನಿರೂಪಿಸಿದರು.